ಅರಸೀಕೆರೆ ಮಹಾ ಜನತೆಯ ಬಹು ದಿನಗಳ ಕನಸು ಅರಸೀಕೆರೆಯಲ್ಲಿ ವಂದೇ ಭಾರತ್ ರೈಲು ನಿಲುಗಡೆ ಆಗಲಿ ಎಂದು ರೈಲ್ವೆ ಅಧಿಕಾರಿಗಳಿಗೆ ಮನವಿ
ರುದ್ರಾಕ್ಷ ಫೌಂಡೇಶನ್ ಆಶ್ರಯದ ಸಮರ್ಪಣಾ ಹಾಗೂ ಸಂಕಲ್ಪ ಸಂಸ್ಥೆ ವತಿಯಿಂದ ಅರಸೀಕೆರೆಗೆ ವಂದೇ ಭಾರತ್ ರೈಲನ್ನು ನಿಲುಗಡೆ ನೀಡಬೇಕೆಂದು ಹಾಗೂ ಅರಸೀಕೆರೆ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕೆಲಸವನ್ನು ಬೇಗ ಮುಗಿಸಬೇಕೆಂದು ಮನವಿ ಪತ್ರವನ್ನು ಅರ್ಸೀಕೆರೆ ರೈಲ್ವೆ ಸ್ಟೇಷನ್ ಮ್ಯಾನೇಜರ್ ರವರಿಗೆ ನೀಡಲಾಯಿತು ಕಾರ್ಯಕ್ರಮದಲ್ಲಿ ಮಾತನಾಡಿದಂತಹ ರುದ್ರಾಕ್ಷ ಫೌಂಡೇಶನ್ ಅಧ್ಯಕ್ಷರಾದ ಜೈ ಪ್ರಕಾಶ್ ಗುರೂಜಿ ಅರಸೀಕೆರೆ ಮಹಾಜನತೆಯ ಬಹುದಿನಗಳ ಕನಸು ವಂದೇ ಭಾರತರ ರೈಲು ಅರಸೀಕೆರೆಯಲ್ಲಿ ನಿಲುಗಡೆ ಅರಸೀಕೆರೆ ರೈಲು ನಿಲ್ದಾಣಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರಯಾಣಿಕರು ಪ್ರತಿದಿನವೂ ಬರುತ್ತಾರೆ ಹಾಗೂ ಕರ್ನಾಟಕ ರಾಜ್ಯದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಅರಸೀಕೆರೆಯು ಒಂದು ಎಂಬ ಹೆಗ್ಗಳಿಕೆ ಇದೆ ಈ ರೈಲು ನಿಲ್ದಾಣದಲ್ಲಿ ವಂದೇ ಭಾರತ ರೈಲು ನಿಲುಗಡೆ ನೀಡಿದರೆನೂರಾರು ಪ್ರಯಾಣಿಕರು ರೈಲನ್ನು ಹತ್ತಲು ಸಹಕಾರ ಆಗುತ್ತದೆ ಎಂಬುದು ದೇಶದ ರೈಲ್ವೆ ಸಚಿವರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ನಮ್ಮ ಮನವಿ ಮತ್ತು ಅರಸಿಕೆರೆ ರೈಲು ನಿಲ್ದಾಣದಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ಈಗ ನಡೆಯುತ್ತಿದೆ ಇದು ಬಹಳಷ್ಟು ಸಂತೋಷದ ವಿಚಾರ ಆದರೆ ಕಾಮಗಾರಿಯೂ ಬಹಳ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಕಾಮಗಾರಿಯನ್ನು ಬೇಗ ಮುಗಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಈ ಎಲ್ಲಾ ವಿಷಯವನ್ನು ನಾವು ರೈಲ್ವೆ ಸ್ಟೇಷನ್ ಮ್ಯಾನೇಜರ್ ರವರಿಗೆ ಮನವಿ ಪತ್ರ ಮೂಲಕ ನೀಡಿರುತ್ತೇವೆ ಇದಕ್ಕೆ ಸ್ಟೇಷನ್ ಮಾಸ್ಟರ್ ರವರು ನಾವು ನಮ್ಮ ಮೇಲೆ ಅಧಿಕಾರಿಗಳಿಗೆ ಈ ಮರವಿ ಪತ್ರವನ್ನು ಕಳಿಸಿಕೊಡುತ್ತೇವೆ ಎಂದು ತಿಳಿಸಿರುತ್ತಾರೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಸಮರ್ಪಣ ಅಧ್ಯಕ್ಷರಾದ ಶ್ರೀಮತಿ ವನಜಾಕ್ಷಿ ವಿಜಯಕುಮಾರ್ ಸಂಕಲ್ಪ ಸಂಸ್ಥೆಯ ಸಂಚಾಲಕರಾದ ಶ್ರೀಮತಿ ದಿವ್ಯ ಸರೋಜಮ್ಮ ಶಾಂತಮ್ಮ ರಾಮಚಂದ್ರು ರಾಜಣ್ಣ ಪುಟ್ಟಸ್ವಾಮಿ ಆಶಾ ಶಾಂತಮ್ಮ ಮೀನಾಕ್ಷಮ್ಮ ಹಾಗೂ ಇತರರು ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು
ಒಂದೇ ಭಾರತ್ ರೈಲು ನಿಲುಗಡೆಗೆ ಮನವಿ
Leave a Comment
