ಅರಸೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅದ್ದೂರಿ ಸ್ವತಂತ್ರೋತ್ಸವ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಇಂದಿನ ಯುವ ಜನತೆ ತಮ್ಮ ವಿದ್ಯಾರ್ಥಿ  ಜೀವನದಲ್ಲಿ ದೇಶ ಸೇವೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಅರಸೀಕೆರೆ ಯ  ನಿವೃತ್ತ ಸೈನಿಕರಾದ ಶ್ರೀಯುತ  ಅಣ್ಣೇಗೌಡರು ತಿಳಿಸಿದರು. ಶ್ರೀಯುತರು ಜಾಜುರು ಸಮೀಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅರಸಿಕೆರೆ ಇಲ್ಲಿ ಸಾಂಸ್ಕೃತಿಕ ಸಮಿತಿ,ರಾಷ್ಟ್ರೀಯ ಸೇವಾ ಯೋಜನೆ ಹಾಗೂ ದೈಹಿಕ ಶಿಕ್ಷಣ ವಿಭಾಗಗಳಿಂದ ಆಯೋಜಿಸಿದ್ದ  ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿ ಸಮೂಹ ಕೇವಲ ತಮ್ಮ ಸಮಯವನ್ನು ಕಲಿಕೆ ಹಾಗೂ ಸಾಮಾಜಿಕ ಮಾಧ್ಯಮಗಳಷ್ಟೇ ಅಲ್ಲದೆ ದೇಶ ಸೇವೆಯ ಬಗ್ಗೆಯೂ  ಆಸಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ನಾವು ನಮ್ಮ ಜೀವನದಲ್ಲಿ ಸುಖದಿಂದ ನೆಮ್ಮದಿಯಿಂದ ಇರಬೇಕಾದರೆ ನಮ್ಮ ದೇಶವನ್ನು ರಕ್ಷಣೆ ಮಾಡುವ  ಸೈನಿಕರು ಮತ್ತು ಅವರ ಶ್ರಮ ಅವರ ಕಷ್ಟಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಸ್ಪಂದಿಸುವ  ರೀತಿಯಲ್ಲಿ ನಾವು ಸಹ ಬೆಳೆಯಬೇಕೆಂದು ತಿಳಿಸಿದರು. ದೇಶ ರಕ್ಷಣೆಯ ಕಾರ್ಯದಲ್ಲಿ ನಿರತರಾಗಿರುವ ಎಷ್ಟೋ ಸಾವಿರಾರು ಸೈನಿಕರು ದೇಶದ ರಕ್ಷಣೆ ಗೋಸ್ಕರ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿರುವ ಅನೇಕ ಉದಾಹರಣೆಗಳನ್ನು ಸಹ ತಿಳಿಸಿದರು. ಸಮಾರಂಭವನ್ನು ಆಯೋಜಿಸಿದ್ದ ಸಾಂಸ್ಕೃತಿಕ  ಸಮಿತಿಯ ಸಂಚಾಲಕರಾದ ಡಾಕ್ಟರ್ ಬಿ ಶಿವಕುಮಾರ ಅವರು ಮಾತನಾಡಿ  ಸ್ವತಂತ್ರ ದಿನಾಚರಣೆ ಕೇವಲ ಸ್ವತಂತ್ರ ದಿನಾಚರಣೆಯ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಪ್ರತಿದಿನವೂ ಕೂಡ ಸ್ವತಂತ್ರವಾಗಿ ಆಲೋಚನೆಯನ್ನು ಮಾಡಿದವರು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸ್ವತಂತ್ರವಾಗಿ ನಿರ್ಧಾರಗಳನ್ನು ಜಾರಿಗೊಳಿಸುವುದರ ಮೂಲಕ ನಾವು ನಿಜಾರ್ಥದಲ್ಲಿ ಸ್ವತಂತ್ರರಾಗಿದ್ದೇವೆ ಎಂದು ಅದನ್ನು ಅದನ್ನು ಅನುಷ್ಠಾನಗೊಳಿಸುವುದರ ಮೂಲಕ ಸ್ವಾತಂತ್ರ್ಯ ಎಂಬ ಪದಕ್ಕೆ  ನಿಜಾರ್ಥವನ್ನು ನೀಡಬಹುದು ಎಂದು ತಿಳಿಸಿದರು. ದೇಶ ರಕ್ಷಣೆ ಮತ್ತು ಅದರ ಅಭಿವೃದ್ಧಿಯ ವಿಷಯದಲ್ಲಿ ಪ್ರತಿಯೊಬ್ಬರೂ ಕೂಡ ಸೈನಿಕರಾಗಬೇಕೆಂದು ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಯಾದ ಶ್ರೀಯುತ ಕುಮಾರವರು ಮಾತನಾಡಿ ಇಂದಿನ ಯುವ ಜನತೆ ಕೇವಲ ತಮ್ಮ ಅಮೂಲ್ಯವಾದಂತ ಸಮಯವನ್ನು ಮೊಬೈಲ್ ಬಳಕೆ ಅಥವಾ ಇನ್ನಿತರೆ ಚಟುವಟಿಕೆಗಳಲ್ಲಿ  ಕಳೆಯದೆ ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಬೇಕು ಮತ್ತು ದೇಶದ ಅಭಿವೃದ್ಧಿಯಲ್ಲಿ ತಮ್ಮ ಪ್ರಾಮಾಣಿಕವಾದಂತ ಕಾಳಜಿಯನ್ನು ತೋರಿಸಬೇಕು ಎಂದು ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ  ಪ್ರೊ.ಗೀತಾ ರವರು ಮಾತನಾಡಿ ಸ್ವತಂತ್ರ ದಿನಾಚರಣೆ ದೇಶದ ಒಂದು ಪ್ರಮುಖ ರಾಷ್ಟ್ರೀಯ ಹಬ್ಬ ಆದ್ದರಿಂದ  ಎಲ್ಲ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ  ದೇಶದ ಅಭಿವೃದ್ಧಿಗೆ ಸಂಕಲ್ಪ ಮಾಡಿ ಮತ್ತು ತಮ್ಮೆಲ್ಲಾ ನಿರ್ಧಾರಗಳನ್ನ ಜಾರಿಗೊಳಿಸಿದರೆ, ನಮ್ಮ ದೇಶ ತ್ವರಿತವಾಗಿ ಅಭಿವೃದ್ಧಿ ಆಗುವದರಲ್ಲಿ  ಯಾವುದೇ ಸಂಶಯ ಇಲ್ಲ ಎಂದು ತಿಳಿಸಿದರು. ಈ ಕಾರ್ಯಕ್ರಮದ ಕೇಂದ್ರ ಬಿಂದುವಾದ ಅರಸೀಕೆರೆ ಯ  ನಿವೃತ್ತ ಸೈನಿಕರಾದ ಶ್ರೀಯುತ ಅಣ್ಣೇಗೌಡ ರವರ ಜೀವನ ಮತ್ತು ಸಾಧನೆಗಳನ್ನು ಶ್ಲಾಘಿಸಿದರು. ವಿದ್ಯಾರ್ಥಿನಿ ಕುಮಾರಿ ಪೂರ್ಣಿಮಾ ಮತ್ತು ತಂಡದವರ ಸ್ವಾತಂತ್ರ್ಯ ಗೀತೆ ಸಮಾರಂಭಕ್ಕೆ ಇನ್ನಷ್ಟು ಮೆರಗು  ತಂದಿತ್ತು. ಸಮಾರಂಭದಲ್ಲಿ ದೈಹಿಕ ಶಿಕ್ಷಣ ವಿಭಾಗದ ಸಂಚಾಲಕರು ಡಾ.ವಿಶ್ವನಾಥ್ ದೈಹಿಕ ಶಿಕ್ಷಣ ನಿರ್ದೇಶಿಕರಾದ ಶ್ರೀಯುತ ಹರೀಶ್, ಪ್ರಾಧ್ಯಾಪಕರಾದ ಪ್ರೊ. ರಾಜಶೇಖರ್ ಡಾ. ವಸಂತ ಕುಮಾರಿ, ಉಪನ್ಯಾಸಕರಾದ ಡಾ.ಹರೀಶ್ ಕುಮಾರ್, ಶ್ರೀ ಉಮಾಶಂಕರ್, ವುಲ್ಫತ್  ಜಹಾನ್, ಶ್ರೀ ಲೋಕೇಶ್, ಕಚೇರಿ ಸಿಬ್ಬಂದಿಯವರಾದ ಶ್ರೀಮತಿ ವೀಣ ಬಿ.ಜಿ. ಶ್ರೀಯುತ ಮೋಹನ್ ರಾಜ್, ಶ್ರೀಮತಿ ಪ್ರತಿಭಾ, ಶ್ರೀ ಶಿವಶಂಕರ್ ಪವನ್ ಕುಮಾರ್  ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಅಂತಿಮ ಬಿಎ ವಿದ್ಯಾರ್ಥಿಯಾದ ಕು. ಚಂದ್ರಶೇಖರ್ ನಡೆಸಿಕೊಟ್ಟರು ದ್ವಿತೀಯ ಬಿಎ ವಿದ್ಯಾರ್ಥಿನಿಯರಾದ ಸರ್ವರನ್ನು ಸ್ವಾಗತಿಸಿದರು ಮತ್ತು ಕುಮಾರಿ ಮೇಘನ ಸಮಾರಂಭದ ಆಹ್ವಾನಿತ ವ್ಯಕ್ತಿ ಪರಿಚಯ ಮಾಡಿಕೊಟ್ಟರು ಕಾರ್ಯಕ್ರಮದ ವಂದನಾರ್ಪಣೆಯನ್ನು ದ್ವಿತೀಯ ಬಿಸಿಎ  ವಿದ್ಯಾರ್ಥಿನಿ ಕುಮಾರಿ ನಮಿತಾ ನಡೆಸಿಕೊಟ್ಟರು. ವೇದಿಕೆ ಕಾರ್ಯಕ್ರಮದ ನಂತರ ಆಹ್ವಾನಿತ  ವ್ಯಕ್ತಿಗಳು ಮತ್ತು ವಿದ್ಯಾರ್ಥಿಗಳ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು. ಕಾಲೇಜಿನಲ್ಲಿ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಕಾಲೇಜಿನ ಬೋಧಕ, ಬೋಧಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳಿಗೆ  ಕಾಲೇಜಿನ ಪ್ರಾಂಶುಪಾಲರು ಪ್ರೊ. ಗೀತಾ ಹಾಗೂ ಮುಖ್ಯ ಅತಿಥಿಗಳಾದ  ಶ್ರೀಯುತ ಅಣ್ಣೇಗೌಡ ರವರು ಸ್ವತಂತ್ರ ದಿನಾಚರಣೆಯ  ಸಂದೇಶ ಮತ್ತು ಶುಭಾಶಯಗಳನ್ನು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *