
ಮಾಡಾಳು ಇತಿಹಾಸ ಪುಣ್ಯಕ್ಷೇತ್ರ ಎಂದೇ ಜನಮನದಲ್ಲಿ ಪ್ರಸಿದ್ಧಿ ಹೊಂದಿರುವ ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಆಷಾಢ ಮಾಸದ ಕೊನೆ ಭೀಮನ ಅಮಾವಾಸ್ಯೆ ಅಂಗವಾಗಿ ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಪಾದಪೂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ನೆರವೇರಿತು ಅರಸೀಕೆರೆ ತಾಲ್ಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಅಪ್ಪಣೆ ಮೇರೆಗೆ ಲೋಕಕಲ್ಯಾಣಾರ್ಥವಾಗಿ ಪ್ರತಿ ತಿಂಗಳ ಅಮಾವಾಸ್ಯೆಯಂದು ಸಂಪ್ರದಾಯದಂತೆ ಜಗನ್ಮಾತೆ ಅಮ್ಮನವರಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಾ ಬಂದಿದ್ದು ಇಂದೂ ಸಹ ಶ್ರೀಗಳ ಪಾದಪೂಜೆ ಸಲ್ಲಿಸಲಾಯಿತು ಪೂಜೆಯ ಅಂಗವಾಗಿ ದೇವಾಲಯವನ್ನು ಮಾವಿನ ತಳಿರು ತೋರಣ ಬಾಳೆ ಕಂದುಗಳಿಂದ ಶೃಂಗರಿಸಿದ್ದರೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಿದ್ದು ಭಕ್ತರ ಕಣ್ಮನ ಸೆಳೆಯಿತು . . ಸಂಜೆ 8 ಗಂಟೆಗೆ ಸುಕ್ಷೇತ್ರ ಕೋಡಿಮಠದ ಮಹಾ ತಪಸ್ವಿ ಶಿವಲಿಂಗಜ್ಜಯ್ಯಮೂರ್ತಿ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಮತ್ತು ಅಮ್ಮನವರಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು ನಂತರ ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದ ಚೇತನ್ ಮರಿದೇವರು ಪ್ರತಿಯೊಬ್ಬ ಮನುಷ್ಯನಿಗೂ ಗುರು ಇದ್ದಾಗ ಮಾತ್ರ ಬದುಕು ಸಮೃದ್ಧ ಗೊಳ್ಳುತ್ತದೆ ಉತ್ತಮ ಅರಿವು ಆಚಾರ ಇಟ್ಟುಕೊಂಡು ಗುರಿ ಯಡೆಗೆ ಸಾಗಬೇಕು ಎಂದು ತಿಳಿಸಿದರು ಇಂದಿನ ಆಧುನಿಕ ಜಗತ್ತಿನಲ್ಲಿ ಜಂಜಾಟ ಹಣ ಗಳಿಕೆ ಹಾಗೂ ಕೀರ್ತಿಗಾಗಿ ಧಾವಂತ ಬದುಕಿನಲ್ಲಿ ಪರಿಸ್ಥಿತಿಸುತ್ತಿದ್ದು ಶಾಂತಿ ನೆಮ್ಮದಿ ಬದುಕಿಗೆ ಧರ್ಮ ಒಂದೇ ಆಶಾಕಿರಣವಾಗಿದೆ ಎಂದು ಸ್ವಾಮೀಜಿ ಹೇಳಿದರು ಬಂದ ಭಕ್ತಾದಿಗಳಿಗೆ ಶ್ರೀಮತಿ ನೀಲಮ್ಮ ಶಂಕರಪ್ಪ ಮತ್ತು ಮಕ್ಕಳುದುಮೇನಹಳ್ಳಿ ಹಾಗೂ ಷಡಕ್ಷರಪ್ಪ ಮತ್ತು ಮಕ್ಕಳು ಹುಣಸೆ ಕಟ್ಟಿ ದಾಸೋಹ ವ್ಯವಸ್ಥೆ ಕಲ್ಪಿಸಿದ್ದರು ಮಾಡಾಳು ಗ್ರಾಮಸ್ಥರು ಸೇರಿದಂತೆ ಸೀತಾಪುರ ಕೊಪ್ಪಲು ಎರೇಹಳ್ಳಿ ವೈಜಿಹಳ್ಳಿ ಪಿ ಹೊಸಳ್ಳಿ ಕಿತ್ತ ನಕೆರೆ ದೋಣನ ಕಟ್ಟೆ ಬೊಮ್ಮಸಮುದ್ರ ಕೆ ಶಂಕರನಹಳ್ಳಿ ಕಡಲ ಮಗ ಡಿಎಂ ಕುರ್ಕೆ ಶಶಿವಾಳ ಹಾರನಹಳ್ಳಿ ಅಣ್ಣನಾಯಕನಹಳ್ಳಿ ಗ್ರಾಮಗಳ ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು
