ಚಿಕ್ಕಮಗಳೂರು ನಗರದ ಗ್ಯಾರೇಜ್, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಬಾಲ ಮತ್ತು ಕಿಶೋರ ಕಾರ್ಮಿಕ ನಿರ್ಮೂಲನೆಗಾಗಿ ಅನಿರೀಕ್ಷಿತ ದಾಳಿ ನಡೆಸಲಾಯ್ತು. ಕೆಲಸ ಮಾಡುತಿದ್ದ ಕಾರ್ಮಿಕರುಗಳಿಗೆ ಹಾಗೂ ಮಾಲೀಕರುಗಳಿಗೆ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಅರಿವು ಮೂಡಿಸಲಾಯಿತು. ಹಾಗೂ ಎ ಎಫ್ ಇಂಜಿನೀಯರಿಂಗ್ ವರ್ಕ್ಸ್ ಎಂಬ ಸಂಸ್ಥೆಯಲಿ ಒಬ್ಬ ಕಿಶೋರ ಕಾರ್ಮಿಕನನ್ನು ರಕ್ಷಣೆಗೊಳಿಸಿ ಮಕ್ಕಳ ಕಲ್ಯಾಣ ಸಮೀತಿಗೆ ಹಾಜರೂಪಡಿಸಲಾಯಿತು. ಈ ಸಂರ್ಬದಲ್ಲಿ ಸಹಾಯಕ ಕಾರ್ಮಿಕ ಆಯುಕ್ತರು, ಹಿರಿಯ ಕಾರ್ಮಿಕ ನೀರೀಕ್ಷಕರು 1&2ನೇ ವೃತ್ತ,ಚಿಕ್ಕಮಗಳೂರು ಹಾಗೂ ಜಿಕ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಸಿಬಂದಿ ಭಾಗವಹಿಸಿದರು.
