
ಅರಸೀಕೆರೆ ತಾಲೂಕಿನ ಖ್ಯಾತ ವಕೀಲರು ರಾಜಕೀಯ ಮುಖಂಡರಾದ ವಿವೇಕ್ ರವರ ಹುಟ್ಟುಹಬ್ಬವನ್ನು ರಾಜಕೀಯ ಮುಖಂಡರು ಸಂಘ ಸಂಸ್ಥೆಗಳ ಮುಖಂಡರು ತಾಲೂಕಿನ ರಾಜಕಾರಣಿಗಳು ಹಾಗೂ ಅಪಾರ ಅಭಿಮಾನಿಗಳು ಅರಸೀಕೆರೆ ನಗರದ ಬಿಎಚ್ ರಸ್ತೆಯಲ್ಲಿರುವ ತಮ್ಮ ಕಚೇರಿಗೆ ಭೇಟಿ ನೀಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು
ಅರಸಿಕೆರೆ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಗೀಜಿಹಳ್ಳಿ ಧರ್ಮಶೇಖರ್. ತಾಲೂಕ್ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ್ ಜೆಡಿಎಸ್ ಪಕ್ಷದ ಮುಖಂಡರಾದ ಹೊಸೂರು ಗಂಗಾಧರ್. ನಗರಸಭೆ ಮಾಜಿ ಅಧ್ಯಕ್ಷರಾದ ಗಿರೀಶ್. ಅರಸಿಕೆರೆ ತಾಲೂಕ್ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಕಿರಣ್ ಹಾಗೂ ರಕ್ಷಣಾ ವೇದಿಕೆ ಹಲವಾರು ಮುಖಂಡರು. ಹಾಸನ ಜಿಲ್ಲಾ ಮಾಜಿ ಅಧ್ಯಕ್ಷರಾದ ಸಿಖಂದರ್ ಪತ್ರಕರ್ತ ಮೋಧಿನ್ ಪಾಷಾ ಸೇರಿದಂತೆ ಹಲವಾರು ಮುಖಂಡರು ಶುಭಾಶಯ ಕೋರಿದರು
ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕರಾದ ಎಚ್ ಡಿ ರೇವಣ್ಣ ಹುಟ್ಟು ಹಬ್ಬದ ಶುಭ ಹಾರೈಸಿದ್ದಾರೆ
ಹಾಸನ ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಸಚಿವರು ಹಾಗೂ ಜೆಡಿಎಸ್ ನಾಯಕರದ ಎಚ್ ಡಿ ರೇವಣ್ಣ ಮಾತನಾಡಿ ವಿವೇಕ್ ರವರು ಅತಿ ಚಿಕ್ಕ ವಯಸ್ಸಿನಲ್ಲಿ ವಕೀಲ ವೃತ್ತಿಯಲ್ಲಿ ಉತ್ತಮವಾಗಿ ವಾಗ್ಮಿಯಾಗಿ ಅರಸೀಕೆರೆ ತಾಲೂಕಿನ ಸಾರ್ವಜನಿಕವಾಗಿ ಉತ್ತಮ ಸ್ಪಂದಿಸಿದ್ದಾರೆ ಮುಂದೆಯೂ ಸಹ ಇವರ ಭವಿಷ್ಯ ಉಜ್ವಲವಾಗಿರಲಿ ಇಂದು ಹುಟ್ಟು ಹಬ್ಬದ ಪ್ರಯುಕ್ತ ಶುಭ ಹಾರೈಸಿದ್ದಾರೆ