ಅರಸೀಕೆರೆ: ನಗರದ ಹೆಸರಾಂತ ಬೆಥನಿ ಸೆಂಟ್ರಲ್ ಶಾಲೆಯು ಈ ವರ್ಷದ 2026 ಹಾಗೂ 2027ನೇ ಸಾಲಿನ ಪುನರಾರಂಭ ಕಾರ್ಯಕ್ರಮಕ್ಕೆ ಶಿಕ್ಷಕರಿಂದ ಭಗವದ್ಗೀತೆ, ಬೈಬಲ್, ಕುರನ್, ಬೋಧಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಚಾಕ್ಲೆಟ್ ನೀಡುವ ಮೂಲಕ ಸ್ವಾಗತ ಮಾಡಿ ಬರಮಾಡಿಕೊಂಡರು. ಸ್ವಾಗತ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಪ್ರಾರಂಭಿಸಿದ್ದು ರಾಷ್ಟ್ರಗೀತೆ ಹಾಡಲಾಯಿತು ಶಿಕ್ಷಕರಿಂದ ಡ್ಯಾನ್ಸ್ ಹಾಗೂ ಆಯಾ ತರಗತಿಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಸ್ವಾಗತ ಬಯಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಿನ್ಸಿಪಲ್ ಐರನ್ ಡಿಸೋಜಾ ರವರು ಮಾತನಾಡಿ ಎಲ್ಲಾ ಮಕ್ಕಳಿಗೆ ಬೆಥನಿ ಸೆಂಟ್ರಲ್ ಶಾಲೆಗೆ ಸ್ವಾಗತ ಬಯಸಿ ವಿದ್ಯಾರ್ಥಿಗಳೇ ನಮ್ಮ ಶಾಲೆಯಲ್ಲಿ ಶಿಸ್ತು ಮುಖ್ಯ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ನೀಡಬೇಕು ಶಿಕ್ಷಕರನ್ನು ಗೌರವಿಸಬೇಕು ಪೋಷಕರ ಮಾತು ಕೇಳಬೇಕು ಒಂದು ಒಳ್ಳೆಯ ಭವಿಷ್ಯ ನಮ್ಮ ಶಾಲೆಯಿಂದ ಪಡೆದುಕೊಳ್ಳಬೇಕೆಂದು ನಮ್ಮ ಉದ್ದೇಶವಾಗಿರುತ್ತದೆ ಹಾಗೂ ಪಾಠಗಳನ್ನು ಬೋಧಿಸುವ ಒಳ್ಳೆಯ ವ್ಯಕ್ತಿತ್ವವುಳ್ಳ ಶಿಕ್ಷಕರು ಇದ್ದಾರೆ ಸುಂದರ ವಾತಾವರಣ ಎಲ್ಲಾ ತರಹದ ಸೌಲಭ್ಯ ಕ್ರೀಡೆಗಳು ಲಭ್ಯವಿದೆ ಇದರ ಪ್ರಯೋಜನ ನೀವು ಪಡೆದುಕೊಂಡು ಒಳ್ಳೆಯ ವಿದ್ಯಾಭ್ಯಾಸ ಮಾಡಿ ದೇಶಕ್ಕೆ ಮಾದರಿಯ ವ್ಯಕ್ತಿಗಳಾಗಿ ಎಂದು ಬೋಧನೆ ಮಾಡಿದರು.
ವರದಿ ಎಂ ಡಿ ನಾಸೀರ್ ಅರಸೀಕೆರೆ
ಭಗವದ್ಗೀತೆ ಬೈಬಲ್ ಕುರಾನ್ ಬೋಧಿಸುವ ಮೂಲಕ ಬೆಥನಿ ಸೆಂಟ್ರಲ್ ಶಾಲೆ ಪುನರಾರಂಭ
Leave a Comment
