ಮಾಡಾಳು ಹಾಲು ಕರೆದು ಜೀವನ ಸಾಗಿಸುತ್ತಿದ್ದ ರೈತನ ಹಸು ಹೊಲದಲ್ಲಿ ಮೇಯಿತಿದ್ದ ವೇಳೆ ವಿದ್ಯುತ್ ತಂತಿ ತಾಗಿಮೃತಪಟ್ಟಿದ್ದು ಕಂಗಾಲಾದ ಆತ ಪರಿಹಾರ ನೀಡಿ ಎಂದು ತಾಲೂಕ್ ಆಡಳಿತದ ಮೊರೆ ಹೋಗಿದ್ದ ಅರಸೀಕೆರೆ ತಾಲ್ಲೂಕ್ ಕಣಕಟ್ಟೆ ಹೋಬಳಿ ತುಂಬಾ ಪುರ ಗ್ರಾಮದ ರೈತ ನಂಜುಂಡಯ್ಯನ ಮನವಿಗೆ ಸ್ಪಂದಿಸಿದ ಸರ್ಕಾರ ವಿದ್ಯುತ್ ಇಲಾಖೆಯ ಅಧಿಕಾರಿಗಳು ಆತನಿಗೆ 45 ಸಾವಿರ ರೂಪಾಯಿ ಚೆಕ್ ನೀಡಿದ್ದು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾನೆ ಕಳೆದ ವರ್ಷ ಆಗಸ್ಟ್ 28 ರಂದು ಹೊಲದಲ್ಲಿ ಮೇಯುತಿದ್ದ ವೇಳೆ ನೆಲಕ್ಕೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಾಗಿ ಸ್ಥಳದಲ್ಲಿ ಮೃತಪಟ್ಟಿತ್ತು ಅದನ್ನು ಕಂಡು ನಂಜುಂಡಯ್ಯದುಃಖವ ಮಡುವಿನಲ್ಲಿದ್ದಾಗ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನವೀನ್ ಅವರು ಅವನಿಗೆ ಧೈರ್ಯ ತುಂಬಿ ಶಾಸಕ ಶಿವಲಿಂಗೇಗೌಡ ಹಾಗೂ ಸಂಸದ ಶ್ರೇಯಸ್ ಪಟೇಲ್ರವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದರು ರೈತನ ಮನವಿಗೆ ಸ್ಪಂದಿಸಿದ ಶಾಸಕರು ಸರ್ಕಾರದ ಗಮನಕ್ಕೆ ತಂದು ನೊಂದಿದ್ದ ಬಡ ರೈತನಿಗೆ ಸೆಸ್ಕ್ ಇಲಾಖೆ ಪರಿಹಾರದ ಹಣ ಬಿಡುಗಡೆ ಮಾಡಿತ್ತು ಇಲಾಖೆ ಅಧಿಕಾರಿಗಳು 45 ಸಾವಿರ ರೂಪಾಯಿ ಚೆಕ್ಕನ್ನು ಮಂಗಳವಾರ ನೀಡಿದರು ಅಧಿಕಾರಿಗಳಿಂದ ಚೆಕ್ ಪಡೆದ ಆತ ಶಾಸಕರು ಮತ್ತು ಸಂಸದರಿಗೆ ಅಭಿನಂದನೆ ಸಲ್ಲಿಸಿದ್ದಾನೆ







