
ರಂಗನಹಳ್ಳಿ ಶನೇಶ್ವರ ಸ್ವಾಮಿ ಜಾತ್ರೆಗೆ ಶ್ರೀ ಶ್ರೀ ನಿಶ್ಚಲಾನಂದ ಮಹಾ ಸ್ವಾಮಿಜಿಯವರಿಗೆ ಆಹ್ವಾನ
ಬೆಂಗಳೂರು
ತುಮಕೂರು ಜಿಲ್ಲೆ, ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿ ರಂಗನಹಳ್ಳಿಯ ಶ್ರೀ ಶಿವ ಸತ್ಯ ಶನೇಶ್ವರ ಸ್ವಾಮಿ. ಶ್ರೀ ಆಂಜನೇಯ ಸ್ವಾಮಿ ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರಿ ದೇವಿ ಹಾಗೂ ಶ್ರೀ ಆದಿ ಪರಾಶಕ್ತಿ ಕಾಳಿಕಾದೇವಿಯವರ 22ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಬೆಂಗಳೂರಿನ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾಕ್ಟರ್ ನಿಶ್ಚಲಾನಂದ ಮಹಾಸ್ವಾಮೀಜಿಯವರಿಗೆ ಆಹ್ವಾನ ನೀಡಲಾಯಿತು
ಶ್ರೀ ಶ್ರೀ ಡಾ. ನಿಶ್ಚಲಾನಂದ ಮಹಾಸ್ವಾಮೀಜಿಗಳು ಮಾತನಾಡಿ ಶ್ರೀ ಶನೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಕಳೆದ 22 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು ಈ ಸಮಾರಂಭದಲ್ಲಿ ನಡೆಯುವ ಈ ಸಮಾರಂಭಕ್ಕೆ ಆಗಮಿಸುವ ರಾಜ್ಯದ ಖ್ಯಾತ ಪೀಠಾಧಿಪತಿಗಳು ಮತ್ತು ತಿಪಟೂರು ನೊಣವಿನಕೆರೆ ತಾಲೂಕಿನ ಹಲವು ಆದ್ಯಾತ್ಮಿಕ ಶಕ್ತಿಯುತ ಗ್ರಾಮದೇವತೆಗಳ ಸಂಖ್ಯೆಯನ್ನು ಕೇಳಿ ಶ್ರೀಗಳು ಸಂತಸ ವ್ಯಕ್ತಪಡಿಸಿದರು
ಉದಯವಾಹಿನಿ ಪತ್ರಿಕೆ ಕ್ಯಾಲೆಂಡರ್ ಮತ್ತು ಡೈರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಗಳು ಪತ್ರಿಕೆಯ ವಿನ್ಯಾಸ ಮತ್ತು ಕಳೆದ ಐದು ವರ್ಷಗಳಿಂದ ಪ್ರಕಟಗೊಳ್ಳುತ್ತಿರುವ ಪತ್ರಿಕೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಾಲೂಕುಗಳಲ್ಲಿ ಉತ್ತಮ ಹೆಸರು ಗಳಿಸಿದೆ ಕ್ಯಾಲೆಂಡರ್ ಮತ್ತು ಡೈರಿ ವಿನ್ಯಾಸವನ್ನು ಸಹ ಡಾ. ಶ್ರೀ ಶ್ರೀ ನಿಶ್ಚಲಾನಂದ ಮಹಾಸ್ವಾಮಿಜಿಗಳು. ಸಂತಸ ವ್ಯಕ್ತ ಪಡಿಸಿದರು . ಸಂಪಾದಕರಾದ. ಹೊಂಬೆಗೌಡರು. ಅರಣ್ಯ ಪರಿಸರ ಸಂರಕ್ಷಣಾ ಅಧ್ಯಕ್ಷರಾದ ಕೆ. ಏನ್. ಮಂಜುನಾಥ್. ಕರ್ನಾಟಕ ಆಹಾರ ನಿಗಮ ನಿವೃತ್ತ ಜಿಲ್ಲಾ ವ್ಯವಸ್ಥಾಪಕರಾದ ಶ್ರೀಧರ್. ಉದಯ ವಾಹಿನಿ ರಾಜ್ಯ ವಿಶೇಷ ವರದಿಗಾರ ಬಾಣಾವರ ಉಮೇಶ್. ಸಮಾಜ ಸೇವಕರಾದ ಕುಮಾರ್ ನವೀನ್ ಉಪಸ್ಥಿತರಿದ್ದರು







