ಮಾಡಾಳು ಸರ್ಕಾರ ಒಪ್ಪಲ್ಲಿ ಬಿಡಲಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಶ್ರೀ ತರಳಬಾಳು ಸಾಣೆಹಳ್ಳಿ ಶಾಖ ಮಠದ ಪಟ್ಟಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

:-ಮಾಡಾಳು ಸರ್ಕಾರ ಒಪ್ಪಲ್ಲಿ ಬಿಡಲಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಶ್ರೀ ತರಳಬಾಳು ಸಾಣೆಹಳ್ಳಿ ಶಾಖ ಮಠದ ಪಟ್ಟಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪುನರ್ಚರಿಸಿದ್ದರು.

ತಾಲೂಕಿನ ಕಣಕಟ್ಟೆ ಹೋಬಳಿ   ಮಾಡಳು ಗ್ರಾಮದ ನಿರಂಜನ ಪೀಠದ ಲಿಂಗೈಕ್ಯ ಪರಮ ಪೂಜ್ಯ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿಗಳ 19ನೇ ಪುಣ್ಯ ಸ್ಮರಣೋತ್ಸವ ಮತ್ತು 26ನೇ ಅರಿವಿನ ಜಾಗೃತಿ ಹಾಗೂ ನೂತನ ವಿದ್ಯಾರ್ಥಿ ನಿಲಯದ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು ಸಮಾಜವನ್ನು ಜಾಗೃತಿಗೊಳಿಸಬೇಕಾದ ಮಠಗಳೇ ಸಮಾಜಕ್ಕೆ ತಪ್ಪು ದಾರಿ ತೋರುತ್ತಿರುವುದು ಕಳವಳದ ಸಂಗತಿ ಎಂದರು.

  ನಿಷ್ಠೆ ಮತ್ತು ನಿಷ್ಟುರತೆ ಪ್ರಸ್ತುತ ಸಮಾಜದಲ್ಲಿ ಮರೆಯಾಗುತ್ತಿದೆ ಬೆಳಕು ನೀಡುವುದಕ್ಕಿಂತ ಬೆಂಕಿ ಹಚ್ಚುವರ ಸಂಖ್ಯೆ ಹೆಚ್ಚಾಗುತ್ತಿದೆ ಇದು ಕಳವಳದ ಸಂಗತಿಯಿಂದ ಸ್ವಾಮೀಜಿ ಏಕನಿಷ್ಠೆಯೇ ಲಿಂಗಾಯಿತ ಧರ್ಮದ ಮೂಲತತ್ವ ಎಂಬುದನ್ನ ಮರೆಯಬಾರದು ಗಣಾಚಾರದಿಂದ ಮಾತ್ರ ಸ್ಪಷ್ಟತೆ ದೊರೆಯಲಿದೆ ಎಂದು ಲಿಂಗಾಯತ ಧರ್ಮದ ಅನುಯಾಯಿಗಳಿಗೆ ಕರೆ ನೀಡಿದರು.

   ಮಾಜಿ ಸಚಿವ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್ ಡಿ ರೇವಣ್ಣ ಮಾತನಾಡಿ ರಾಜಕಾರಣಿಗಳು ಹಾಗೂ ಸರ್ಕಾರ ದಾರಿ ತಪ್ಪಿದ ಸಂದರ್ಭದಲ್ಲಿ ಮಠಾಧೀಶರು ಎಚ್ಚರಿಸುವ ಕೆಲಸ ಮಾಡಬೇಕಿದೆ ಪ್ರಸ್ತುತ ಸನ್ನಿವೇಶದಲ್ಲಿ ಮಠಾಧೀಶರ ಮಾರ್ಗದರ್ಶನ ಅವಶ್ಯಕತೆ ಬೇಕಿದೆ ಎಂದು ಹೇಳಿದರು.

    ನಾಡಿನ ಮಠ ಮಂದಿರಗಳು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ್ದರಿಂದ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ಮಕ್ಕಳಿಗೆ ಸಹಕಾರಿಯಾಗಿದೆ ಶೈಕ್ಷಣಿಕವಾಗಿ ರಾಜ್ಯ ಮುಂದಿದೆ ಅಂದರೆ ಅದಕ್ಕೆ ಮಠಾಧೀಶರ ಕೊಡುಗೆ ಅಪಾರವಾಗಿದೆ ಎಂದರು.

   ರಾಜ್ಯಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರು ಆದ ಶಾಸಕ ಕೆಎಂ ಶಿವಲಿಂಗೇಗೌಡ ಮಾತನಾಡಿ ಲಿಂಗೈಕ್ಯ ಚಂದ್ರಶೇಖರ ಸ್ವಾಮೀಜಿಯವರು ಪವಾಡ ಪುರುಷರಾಗಿದ್ದರು ಅರಸೀಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ನಾನು ಸ್ಪರ್ಧಿಸಿದ ಸಂದರ್ಭದಲ್ಲಿ ಅವರ ಆಶೀರ್ವಾದ ಪಡೆಯಲು ಮಠಕ್ಕೆ ಆಗಮಿಸಿದಾಗ ಕಣಕಟ್ಟೆ ಹೋಬಳಿಗೆ ನೀರು ತಗೊಂಡು ಬಾರಯ್ಯ ಎಂಬ ಆಶೀರ್ವಾದದೊಂದಿಗೆ ಆದೇಶ ಮಾಡಿದ್ದರು ಇಂದು ಅವರ ಆಶೀರ್ವಾದ ಫಲಿಸಿದ್ದು ಕಣಕಟ್ಟೆ ಹೋಬಳಿಯ ಕೆರೆಕಟ್ಟೆಗಳಲ್ಲಿ ಇಂದು ಹೇಮಾವತಿ ನೀರು ತುಂಬಿರುವುದೇ ಸಾಕ್ಷಿ ಎಂದು ತಮ್ಮ ನುಡಿ ನಮನ ಸಲ್ಲಿಸಿದರು.

     ಸಮಾರಂಭದಲ್ಲಿ ಕೆರಗೋಡಿ ಕೆರಗೋಡಿ ರಂಗಾಪುರ ಮಠದ ಗುರು ಪರದೇಶಿ ಕೇಂದ್ರ ಸ್ವಾಮೀಜಿ,ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ,ಪಾಂಡುಮಟ್ಟಿ ವಿರಕ್ತ ಮಠದ ಗುರು ಬಸವ ಮಹಾಸ್ವಾಮಿಜಿ, ಕನಕಗಿರಿ ಮಠದ ಚನ್ನಮಲ್ಲ ಮಹಾಸ್ವಾಮೀಜಿ, ಡಿಎಂ ಕುರ್ಕೆ ಬೂದಿಹಾಳ್ ವಿರಕ್ತಮಠದ ಶಶಿಕರ ಸಿದ್ದ ಬಸವ  ಸ್ವಾಮೀಜಿ,ಮಾರ್ಗೊಂಡನಹಳ್ಳಿ ಮಠದ ಅಭಿನವ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರೆ,
ಖ್ಯಾತ ಸಾಹಿತಿ ವಾಕ್ಮಿ ಚಟ್ನಳ್ಳಿ ಮಹೇಶ್, ಚಲನ ಚಿತ್ರ ನಟ ಚೇತನ್ ಮಾತನಾಡಿದರು.ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ ಎಸ್ ಪಿ ಸ್ವಾಮಿ ಸಾಧು ವೀರಶೈವ ಸಮಾಜದ ಮುಖಂಡ ಎನಜಿ ಮರಳು ಸಿದ್ದ ಸ್ವಾಮಿ ನಾಗಸಮುದ್ರ ರಾಜ್ಯ ಹಿಂದುಳಿದ ವರ್ಗದ ಅದನ್ನು ಕಾರ್ಯದರ್ಶಿ ಎಮ್ಮಿ ಶಿವಕುಮಾರ್ ಓಂಕಾರ ಮೂರ್ತಿ ಉಪಸ್ಥಿತರಿದ್ದರು

Share This Article
Leave a Comment

Leave a Reply

Your email address will not be published. Required fields are marked *