ಕಾರ್ಯಕ್ರಮವು ಸಂಜೆ 5.00 ಗಂಟೆಗೆ ಆರಂಭಗೊಂಡಿತು. ಸಮಾರಂಭದ ಉದ್ಘಾಟನೆಯನ್ನು ಶ್ರೀಮತಿ ರಶ್ಮಿ ಎಸ್. (ಸಂಪಾದಕರು, ಸುಧಾ ವಾರಪತ್ರಿಕೆ) ನೆರವೇರಿಸಿದರು. ಪುಸ್ತಕ ಲೋಕಾಪರ್ಣೆಯನ್ನು ಶ್ರೀ ಪುರುಷೋತ್ತಮ ಬಿಳಿಮಲೆ (ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ) ನೆರವೇರಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಶಿವಾನಂದ ತಗಡೂರು (ರಾಜ್ಯಾಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ) ಹಾಗೂ ಶ್ರೀ ನಿಡಶಾಲೆ ಪುಟ್ಟಸ್ವಾಮಯ್ಯ (ಅಧ್ಯಕ್ಷರು, ಕರ್ನಾಟಕ ಕನ್ನಡ ಬರಹಗಾರ ಮತ್ತು ಪ್ರಕಾಶಕರ ಸಂಘ – ರಿ.) ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸಿ. ನಂಜುಂಡಯ್ಯ (ಮಾಜಿ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ) ವಹಿಸಿದ್ದರು.
ಲೇಖಕರ ನುಡಿಯಾಗಿ ಡಾ. ಡಿ.ಸಿ. ರಾಮಚಂದ್ರ ಮಾತನಾಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು ಕೃತಿಯ ಆಶಯ ಹಾಗೂ ಸಾಹಿತ್ಯಿಕ ಮಹತ್ವವನ್ನು ಶ್ಲಾಘಿಸಿದರು. ಸಾಹಿತ್ಯಾಸಕ್ತರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.







