ಕನ್ನಡ ನಾಡು ಶ್ರೀಗಂಧದ ನಾಡು ಸುಂದರ ನದಿ ವನಗಳ ನಾಡು ರಸ ಋಷಿಗಳ ಬೀಡು ಕರವೇ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಅರಸೀಕೆರೆ: ಜೈ ಭುವನೇಶ್ವರಿ ವಾಹನ ಮಾಲೀಕರು ಹಾಗೂ ಚಾಲಕರ ಸಂಘದಿಂದ ಕೋಡಿಹಳ್ಳಿಯ ಅರವಿಂದ್ ಗಾರ್ಮೆಂಟ್ಸ್ ಮುಂಭಾಗ ನಡೆದ 70ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕರವೇ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್ ನಮ್ಮ ಕನ್ನಡ ನಾಡು ಶ್ರೀಗಂಧದ ನಾಡು, ರಾಷ್ಟ್ರಕವಿ ಕುವೆಂಪುರವರು ಹೇಳಿದಂತೆ, ನಮ್ಮ ಕರುನಾಡು ಸುಂದರ ನದಿ ವನಗಳ ನಾಡು. ರಸಋಷಿಗಳ ಬೀಡು. ಗಂಧದ ಚಂದದ ಹೊನ್ನಿನ ಗಣಿ. ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರ ಮಧ್ವರ, ರನ್ನ ಷಡಕ್ಷರಿ ಪೊನ್ನ, ಪಂಪ ಜನ್ಮಿಸಿದ ನಾಡು. cheap replica watches ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸ್ಥಿತಿ ಬದಲಾಗಿದೆ. ಅನ್ಯ ಭಾಷಿಕರ ದಬ್ಬಾಳಿಕೆ ನಮ್ಮ ಕನ್ನಡದ ಮೇಲೆ ಹೆಚ್ಚಾಗಿದೆ. ಕನ್ನಡಿಗರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ. ಒಳ್ಳೆ ಕಡೆ ಉದ್ಯೋಗ ಬೇಕೆಂದರೆ ಇಂಗ್ಲಿಷ್ ಮುಖ್ಯವಾಗಿದೆ. ಇಂದು ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಕನ್ನಡದ ಉಳಿವಿಗಾಗಿ ಎಲ್ಲರೂ ಹೋರಾಡೋಣ. ಕೇವಲ ಈ ದಿನ ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿಸಿದಂತೆ ಆಗುವುದಿಲ್ಲ. ಕನ್ನಡ ನಮ್ಮ ಉಸಿರಾಗಿರಬೇಕು. ಎಂತಹ ಸಂದರ್ಭದಲ್ಲೂ ಕನ್ನಡ ಭಾಷೆಯನ್ನು ಬಿಟ್ಟುಕೊಡಬಾರದು. ಕರ್ನಾಟಕದಲ್ಲಿ ಒತ್ತಾಯದ ಹಿಂದಿ ಏರಿಕೆಯನ್ನು rolex replica watches ವಿರೋಧಿಸೋಣ ವ್ಯಾಪಾರಸ್ಥರು ಕಡ್ಡಾಯವಾಗಿ ಕನ್ನಡದ ಸಾಮ ಫಲಕವನ್ನು ಅಳವಡಿಸಬೇಕು ಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿಎಪಿಎಂಸಿ ಅಧ್ಯಕ್ಷ ಕುಮಾರ್ ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಕನ್ನಡವನ್ನು ಅತಿ ಹೆಚ್ಚು ಬಳಸಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವವರು ಆಚರಿಸುವವರು ವಾಹನ ಚಾಲಕರು ಮತ್ತು ಆಟೋ ಚಾಲಕರು ಎಂದು ತಿಳಿಸಿದರು ಮುಖ್ಯ ಅತಿಥಿಗಳಾಗಿ ಸಂಘದ ಅಧ್ಯಕ್ಷರಾದ ಲೋಕೇಶ್ ಕೋಡಿಹಳ್ಳಿ ಮಾತನಾಡಿ ರಾಜ್ಯೋತ್ಸವ ಆಚರಣೆಯಲ್ಲಿ ನಿಮ್ಮೆಲ್ಲರ ಪಾತ್ರ ಮಹತ್ವದ್ದು. breitling replica watches ನಾಡು-ನುಡಿ, ನಾಡು-ನುಡಿ ಸಂಪತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಎಂದರು ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯತೀಶ್ ಸಂಘದ ಸದಸ್ಯರುಗಳಾದ ಮುಬಾರಕ್ ಸುನಿಲ್ ಶಾಂತಕುಮಾರ್ ಹಾಗೂ ಕೋಡಿಹಳ್ಳಿ ಗ್ರಾಮದ ಮುಖಂಡರು ಸಂಘದ ಸದಸ್ಯರುಗಳು ಭಾಗವಹಿಸಿದ್ದರು

Share This Article
Leave a Comment

Leave a Reply

Your email address will not be published. Required fields are marked *