ಮಾಡಾಳು ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧಿ ಹೊಂದಿರುವ ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮದೇವಿದರ್ಶನಕ್ಕೆ ಬರುವ ತನ್ನ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದು ಹಗಲ ರುಳೆನ್ನದೆ ಸರತಿ ಸಾಲಿನಂ ತು ಅಮ್ಮನವರ ದರ್ಶನ ಪಡೆಯುತ್ತಿದ್ದಾರೆ ಭಾದ್ರಪದ ಮಾಸದ ತದಿಗೆ ದಿನದಂದು ಮೂಲ ಶ್ರೀ ಸ್ವರ್ಣಗೌರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದ್ದು ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ದಂಡು ಹರಿದು ಬರುತ್ತಿದ್ದು ಗುರುವಾರ ತಡರಾತ್ರಿ ಒಂದು ಗಂಟೆಯವರೆಗೂ ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾದರು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರು ಸಂಜೆ 8 ಗಂಟೆಗೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು ನಂತರ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ ನಾಡಿನ ನಾನಾ ಭಾಗಗಳಿಂದ ಅಮ್ಮನವರ ದ ರ್ಶನಕ್ಕೆ ಭಕ್ತರು ಬರುತ್ತಿದ್ದು ಅವರಿಗೆ ಯಾವುದೇ ರೀತಿ ಅನಾನುಕೂಲ ಹಾಗೂ ತೊಂದರೆಯಾಗದಂತೆ ದರ್ಶನ
ಕ್ಕೆ ಅವಕಾಶ ಮಾಡಿಕೊಡಬೇಕೆಂದು ಮತ್ತು ಅವರಿಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ದೇವಾಲಯದ ಆಡಳಿತ ಮಂಡಳಿಗೆ ಸೂಚಿಸಿದರು ಕೋಡಿಮಠದ ಮಹಾ ತಪಸ್ವಿ ಶಿವಲಿಂಗ ಸ್ವಾಮೀಜಿ ಒಂದು ಕೋಟಿ ಜಪ ಮಾಡಿ ಗೌರಮ್ಮ ದೇವಿಗೆ ಬಂಗಾರದ ಮೂಗುತಿಯನ್ನು ಆಶೀರ್ವದಿಸಿ ಮಾಡಾಳು ಗ್ರಾಮದ ತಮ್ಮಭಕ್ತ ಮುದ್ದೇಗೌಡರಿಗೆ ಕರುಣಿಸಿದ್ದರು. ಈಗಿನ ನಮ್ಮ ಪೊಜ್ಯ ವರ್ಯರು ಮೂಲ ಗೌರಮ್ಮ ದೇವಿಗೆ 150 ಲಕ್ಷ ರೂ ವೆಚ್ಚಿ ದಲ್ಲಿ ನೂತನವಾಗ ಶಿ ಲಾ ದೇವಾಲವನ್ನು ನಿರ್ಮಿಸಿಕೊಟ್ಟಿದ್ದಾರೆ ಇದು ರಾಜ್ಯದಲ್ಲಿರುವ ಶಕ್ತಿಪೀಠಗಳುಕೆ ಮತ್ತೊಂದು ಶಕ್ತಿಪೀಠ ವಾಗಿ ಬೆಳೆದು ನನ್ನ ನಂಬಿ ಬರುವ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಲಿದೆ ಎಂದು ಸ್ವಾಮೀಜಿ ತಿಳಿಸಿದರು.ಐನಳ್ಳಿ ಪ್ರಶಾಂತ್ ದೇವ್ರು ಕೋಡಿ ಮಠದ ಏಜೆಂಟ್ ಹೆಚ್ ಸಿ ಮಹದೇವಪ್ಪ ಉಪಸ್ಥಿತರಿದ್ದರು.
ಮಾಡಾಳು ಮೂಲಗೌರಮ್ಮ ದೇವಿ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬರುತ್ತಿರುವ ಜನಸಾಗರ
Leave a Comment
