
ಮಿತ್ರರೇ…ಪ್ರಯತ್ನ ಯಾವಾಗಲೂ ರಹಸ್ಯವಾಗಿರಲಿ,ಬೆಳೆದ ಫಲ ಮಾತ್ರ ಜನರಿಗೆ ಕಾಣಿಸಲಿ…
ದ.ರಾ.ಬೇಂದ್ರೆ ರವರ ನುಡಿಸಾರದಂತೆ ಹಿಂದಿನ ದಿವಸ ಅರಸೀಕೆರೆ ಕಲಾಭವನದಲ್ಲಿ ಗುರುಸಮಾನರಾದ ಡಾ.ಬಿ,ಡಿ ಕುಮಾರ್ ರವರ * ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಬೀಳ್ಕೂಡುಗೆ ಸಮಾರಂಭವನ್ನು ಅವರ ಶಿಷ್ಯಮಿತ್ರರುಗಳು ಹಾಗೂ ಅಭಿಮಾನ ಬಳಗದವರು ಆಯೋಜಿಸಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ,ಹಿ,ಶಿ ರಾಮಚಂದ್ರೇಗೌಡರು ನಿರ್ದೇಶಕರು (ವಿಶ್ರಾಂತ) ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವಹಿಸಿದ್ದರು ಮತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಿ ಕುಮಾರ್ ರಂತಯ ಮೇಷ್ಟ್ರು ಪ್ರಸ್ತುತ ಸಮಾಜಕ್ಕೆ ಅಗತ್ತವಾಗಿದೆ ವೈಚಾರಿಕ ಚಿಂತನೆಗಳಿಲ್ಲದ ಶಿಕ್ಷಣದಿಂದ ಪ್ರಯೋಜನವಿಲ್ಲ ಎಂದರು ಅತಿಥಿಗಳಾಗಿ ಬಂದು ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದ ಎಲ್,ಎನ್ ಮುಕುಂದರಾಜ್ ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಶ್ರೀಯುತರು ಸಭೆಯನ್ನು ಉದ್ದೇಶಿಸಿ ಕುಮಾರ್ ಸಾಗಿಬಂದ ಹೋರಾಟದ ಬದುಕು ಸಹಿಸಿದ ಅವಮಾನಗಳು ಅವರನ್ನು ಪಕ್ವವಾಗಿಸಿವೆ ಈ ಜಗತ್ತು ಸತ್ಯವನ್ನು ಹೇಳಿದವರನ್ನು ವೈಚಾರಿಕ ಚಿಂತನೆಯನ್ನು ಸಾರಿದವರನ್ನೇ ಕೀಳಾಗಿ ಕಾಣಲಾಗಿದೆ ಆ ಕಾರಣದಿಂದ ಸಮಸಮಾಜ ನಿರ್ಮಾಣವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು ನಂತರ ಜಾಣಗೆರೆ ವೆಂಕಟರಾಮಯ್ಯ ಪತ್ರಕರ್ತರು ಹಾಗೂ ಸಾಹಿತಿಗಳು ಇಂದು ಕೃಷಿಯ ಸುಧಾರಣೆ ಅಗತ್ಯವಾಗಿದೆ ಮತ್ತು ಕುಮಾರ್ ಕೇವಲ ಪಾಠಮಾಡಲಿಲ್ಲ ಬದುಕಿ ತೋರಿಸಿ ಮಾದರಿಯಾಗಿದ್ದಾರೆ ಎಂದರು ಉದ್ಘಾಟನಾ ನುಡಿಯಲ್ಲಿ ಕೆ.ಅಮರನಾರಾಯಣ ಐ,ಎ,ಎಸ್ (ವಿಶ್ರಾಂತ) ರವರು ಇಂತಹ ಕಾರ್ಯಕ್ರಮ ತಾಲ್ಲೂಕು ಹಂತದಲ್ಲಿ ನಾನು ನಿರೀಕ್ಷಿಸರಿಲಿಲ್ಲ ಅಭಿನಂದನಾ ಗ್ರಂಥವು ಒಂದು ಮಹತ್ವದ ಪುಸ್ತಕವಾಗಿದೆ ಕುಮಾರ್ ರವರು ತೇಜಸ್ವಿಯಂತಹ ಬದುಕನ್ನು ಆಯ್ಕೆ ಮಾಡಿದ್ದಾರೆ ಮತ್ತು ಅದರಲ್ಲಿ ಆತ್ಮತೃಪ್ತಿಹೊಂದಿರುವರು ಎಂದರು ಇದೇ ವೇದಿಕೆಯಲ್ಲಿ ಡಾ.ಮಳಲಿಗೌಡರು ದಯಾನಂದ ಸಾಗರ ವಿ,ವಿ ಬೆಂಗಳೂರು ಆರ್,ಅನಂತ್ ಕುಮಾರ್ ಅಧ್ಯಕ್ಷರು ಶಿಕ್ಷಣಸಂಸ್ಥೆ ರವಿನಾಕಲಗೂಡು ಮಾಜಿ ಅಧ್ಯಕ್ಷರು ಪತ್ರಕರ್ತರ ಸಂಘ ಹಾಸನ ಸುರೇಶ್ ಪ್ರಾಂಶುಪಾಲರು ಕೋಡಿಮಠ ಪಿ,ಯು ಕಾಲೇಜು ವಹಿಸಿದ್ದರು ಇದೇ ಸಮಾರಂಭದಲ್ಲಿ ತಾಲ್ಲೂಕು ಹಾಗೂ ಜಿಲ್ಲೆಯ ಸಾಹಿತಿಗಳು,ಉಪನ್ಯಾಸಕರುಗಳು ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅವರ ಅಪಾರ ಸಂಖ್ಯೆಯ ವಿಧ್ಯಾರ್ಥಿಗಳು ಅಭಿಮಾನಪೂರ್ವಕವಾಗಿ ಕುಮಾರ್ ಸರ್ ರವರಿಗೆ ಹಾಜರಿದ್ದು ಸನ್ಮಾನಿಸಿ ಗೌರವಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು ಈ ಕಾರ್ಯಕ್ರಮವನ್ನು ಡಾ,ದೊರೇಶ್ ನಿರೂಪಿಸಿದರು ಕೆ,ಎಸ್ ಮಂಜುನಾಥ್ ಸ್ವಾಗತಿಸಿದರು ಮತ್ತು ಡಾ,ಹರೀಶ್ ಕುಮಾರ್ ಪ್ರಾಸ್ತಾವಿಕ ನುಡಿದರು ಡಾ,ಬಸವರಾಜ್ ವಂದಿಸಿದರು.
