ಸಕಲೇಶಪುರ : ನಗರ ಅಭಿವೃದ್ಧಿ ಆಗಬೇಕಾದರೆ ಕಂದಾಯ ವಸೂಲಾಗಬೇಕು ಶಾಸಕ ಸಿಮೆಂಟ್ ಮಂಜು

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!



ಸಕಲೇಶಪುರ: ನೆಲ ಬಾಡಿಗೆ ಯನ್ನೂ ಸಂಗ್ರಹಿಸದ ಪುರಸಭೆ ಮೇಲೆ ಗರಂ ಆದ ಶಾಸಕ ಸಿಮೆಂಟ್ ಮಂಜು
ಸಕಲೇಶಪುರ ಪುರಸಭೆಯಲ್ಲಿ ಬಜೆಟ್ ಪೂರಕ ಸಭೆ ನಡೆಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕರು ರಂಗಶೆಟ್ರು ಅಧ್ಯಕ್ಷರಾಗಿದ್ದಾಗ ಸಕಲೇಶಪುರ ಪುರಸಭೆ ರಾಜ್ಯದಲ್ಲೇ 2ನೇ ಸ್ಥಾನದಲ್ಲಿತ್ತು. ಸಕಲೇಶಪುರ ನಮಗೆ ಎಲ್ಲವನ್ನೂ ಕೊಟ್ಟಿದೆ, ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಸಕಲೇಶಪುರ ನಗರ ಇಲ್ಲ ಅಂದ್ರೆ ನಾವ್ಯಾರೂ ಉಳಿಯಲ್ಲ ಎಂದರು. ಸಕಲೇಶಪುರ ನೆಲಬಾಡಿಗೆ ಪಡೆದು ವ್ಯಾಪಾರ ಮಾಡುವವರು ಬಾಡಿಗೆ ಕಟ್ಟಿಲ್ಲ ಎಂದರೆ ಹೇಗೆ? ಮೀನು  ಮಾಂಸ, ಕೋಳಿ ಅಂಗಡಿಗಳ ಲೈಸನ್ಸ್ ಕಂದಾಯ ಇಲ್ಲದೆ ಪುರಸಭೆ ಹೇಗೆ ಉದ್ದಾರ ಆಗುತ್ತದೆ. ಬಾಕಿ ಕಂದಾಯ ಬಂದರೇ ಸಕಲೇಶಪುರ ಅಭಿವೃದ್ಧಿ ಸಾಧ್ಯ, ಅಧಿಕಾರಿಗಳಾದ ನೀವು ಸರ್ಕಾರದ ಕಾನೂನು ಪಾಲನೆ ಮಾಡಬೇಕಿದೆ ನಾಲ್ಕು ವರ್ಷಕ್ಕೊಮ್ಮೆ ಹೆಚ್ಚು ಮಾಡಬೇಕು ಅಂತ ಅದನ್ನ ಪಾಲೋಪ್ ಮಾಡಿ ಪುರಸಭೆ ಆದಾಯ ಕಲೆಕ್ಟ್ ಮಾಡಿ. ಸಾರ್ವಜನಿಕ ಕೆಲಸಗಳಿಗೆ ಖರ್ಚು ಮಾಡಿ, ಆದಾಯ ಕಡಿಮೆ ನಿರ್ವಹಣೆ ವೆಚ್ಚ ಜಾಸ್ತಿ ಅಂದರೆ ಅದು ಸರಿಯಲ್ಲ ಎಂದರು. ಕಸ ವಿಲೇವಾರಿ ಪ್ರವೀಣ್ ಪ್ರಶ್ನೆಗೆ ಉತ್ತರಿಸಿದರು ಸಮಸ್ಯೆ ಸುದೀರ್ಘ 15 ವರ್ಷಗಳಿಂದ ಇದೆ 2 ಬಾರಿಟೆಂಡರ್ ಆಗಿದೆ ಪರಿಹರಿಸುತ್ತೇವೆಂದರು,ಆರೋಗ್ಯ ಸಮಸ್ಯೆ. ಕುಡಿಯುವ ನೀರು ಶುದ್ದೀಕರಣ ಘಟಕ ನಗರದಲ್ಲಿ ಬೀದಿ ಕಂಬಗಳಲ್ಲಿ ಬೀದಿ ದೀಪ ಇಲ್ಲ, ಸ್ವಾಗತ ಕಮಾನಿಗೆ ದುಡ್ಡಿಟ್ಟಿದ್ದೀವಿ, ಹಿಂದೆ ಇತ್ತು ಈಗ ಹೊಸದು ಮಾಡಬೇಕು ಬೇಗ ಮಾಡೋಣ ಎಲ್ಲಾ ಸಮುದಾಯದ ಸ್ಮಶಾನ ಅಭಿವೃದ್ಧಿಗೆ 3 ಲಕ್ಷ ಹಣ ಸಾಲದು ಹಣ ತಂದು ಮಾಡೋಣ.ಲೇಔಟ್ ಗೆ ಗಣ್ಯರ ಹೆಸರಿಡುವ ವಿಚಾರ, ಮಳಿಗೆ ಹರಾಜು ಮಾಡಲು ಮೊದಲು ಹೈಟೆಕ್ ಶೌಚಾಲಯ ವ್ಯವಸ್ಥೆ, ತೇಜಸ್ವಿ ಸರ್ಕಲ್ ಹತ್ತಿರ ವಾಹನ ದಟ್ಟಣೆ .ಪಟ್ಟಣದಲ್ಲಿ ಟ್ರಾಪಿಕ್ ಸಮಸ್ಯೆ ಮೀನು ಮಾಂಸ. ಚಿಕನ್ ಮಾರ್ಕೆಟ್ ಕಂದಾಯ ವಸೂಲಿ ಮಾಡಿ ಪಶು ಅಧಿಕಾರಿಗಳ ಪರಿಶೀಲನೆ ವರದಿ. ಇನ್ನೂ ಜಾಗ ಹಾಳು ಬಿಟ್ಟರೆ ಮೀನಿನ ಮಾರ್ಕೇಟ್ ಉಳಿಯಲ್ಲ ಮೊದಲು ಜಾಗ ಉಳಿಸಿಕೊಳ್ಳಬೇಕು, 26 ಮಳಿಗೆಗೆ ಮಟನ್ ಚಿಕನ್ ಲೈಸೆನ್ಸ್ ಹರಾಜು ಪ್ರಕ್ರಿಯೆ ಕುರಿತು ಚರ್ಚಿಸಲಾಹಿತು.

✍🏻 ಭರತ್ ಮಲ್ನಾಡ್

Share This Article
Leave a Comment

Leave a Reply

Your email address will not be published. Required fields are marked *