Home Uncategorized ವಾಸುದೇವ ಕೃಪಾ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಉಡುಪಿ

ವಾಸುದೇವ ಕೃಪಾ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಉಡುಪಿ

9
0

ಇಲ್ಲಿ ತಾರೀಕು 29.11.25 ನೇ ಶನಿವಾರದಂದು  20ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ  ಪೋಷಕರಿಗೆ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು ಈ ಕ್ರೀಡಾಕೂಟದ ಮೊದಲು ಶಿಕ್ಷಕ ರಕ್ಷಕ ಸಂಘದ ಮಹಾ ಸಭೆ ನಡೆಸಿ ಮುಖ್ಯೋಪಾಧ್ಯಾಯನಿ ಶ್ರೀಮತಿ ನಿಶಾ ಕೋಟ್ಯಾನ್ ರವರು ನಮ್ಮ ಶಾಲೆಯು 20ನೇ ಶಾಲಾ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು ನಮ್ಮ ವಾರ್ಷಿಕೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಬೇಕು ಎಂದು ನಿರ್ಧಾರಿಸಿರುತ್ತೇವೆ. ಆ ಪ್ರಯುಕ್ತ ಪೋಷಕರ ಪಾತ್ರ ಬಹಳ ಮುಖ್ಯ ವೆಂದು ವಿವರಿಸಿ 2025-26 ನೇ ಸಾಲಿನಲ್ಲಿ ನಡೆದ ಕಾರ್ಯಕ್ರಮಗಳ ವಿವರ ನೀಡಿ ಉಡುಪಿ ತಾಲೂಕಿನಲ್ಲಿ ಮಣಿಪಾಲ
ಅಕಾಡಮಿ ಆಫ್ ಜನರಲ್ ಎಜುಕೇಶನ್ ನ ಅಂಗ ಸಂಸ್ಥೆ ಯಾದ ನಮ್ಮ ಶಾಲೆ ಮಾದರಿ ಶಾಲೆಯಾಗ ಬೇಕು, ಇಂದಿನ ಕ್ರೀಡಾಕೂಟದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ಇನ್ನು ಮುಂದೆ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಇನ್ನೂ ಹೆಚ್ಚಿನ ಉತ್ಸಾಹ ಭರಿತ ಸಹಕಾರ ಸದಾ ನಮ್ಮೊಂದಿಗೆ ಇರಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ್ ಕೋಟ್ಯಾನ್ ಕೊರಂಗ್ರಪಾಡಿ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಪಲ್ಲವಿ ಎಂ .ಹಾಗೂ ಶ್ರೀ ಗುಳ್ಳಯ್ಯ ಪೂಜಾರಿ ಉಪಸ್ಥಿತರಿದ್ದರು🌹🌹🌹.

LEAVE A REPLY

Please enter your comment!
Please enter your name here