ಅಭಿವೃದ್ಧಿ ಎಂದರೆ ಬರೀ ರೈತರ ಅಭಿವೃದ್ಧಿ ಅಲ್ಲ, ದೇಶದ ಅಭಿವೃದ್ಧಿ : ಜೆ.ಹೆಚ್ ಇಂದ್ರೇಶ್*

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!
ವರದಿ ಸಂತೋಷ್ ಚಿಕ್ಕನಾಯಕನಹಳ್ಳಿ



ಚಿಕ್ಕನಾಯಕನಹಳ್ಳಿ,ನ.04: ಅಭಿವೃದ್ಧಿ ಎಂಬುದು ಬರೀ ರೈತರ ಅಭಿವೃದ್ಧಿ ಅಲ್ಲಾ ದೇಶದ ಅಭಿವೃದ್ಧಿಯಾಗಿದೆ, ಆದ್ದರಿಂದಲೇ ರೈತರ ಅಭಿವೃದ್ಧಿಗೆ ಅನುಗುಣವಾಗಿ ಜಿಡಿಪಿಯ ಹೇರಿಳಿತವನ್ನು ಕಾಣಬಹುದಾಗಿದೆ. ರೈತರು ದೇಶದ ಬೆನ್ನೆಲುಬು ಎಂಬುದಕ್ಕೆ ಸಾಕ್ಷಿಯಾಗಿ ಸರ್ಕಾರ ಹೆಚ್ಚು ರೈತ ಪರ ಯೋಜನೆಗಳನ್ನು ತರುತ್ತಿರುವುದು ಶ್ಲಾಘನೀಯ. best replica watches ಸಹಜ ಬೇಸಾಯ ಪದ್ದತಿಗೆ ಹೆಚ್ಚಿನ ಬೆಳೆಗಳನ್ನು ಸೇರಿಸಬೇಕು, ಪ್ರಸ್ತುತ ನಮ್ಮ ತಾಲ್ಲೂಕಿನಲ್ಲಿ ತೆಂಗು ಬೆಳೆಗೆ ಮಾತ್ರ ಈ ಸಹಜ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ರೈತರನ್ನುದ್ದೇಶಿಸಿ ಸಹಾಯಕ ನಿರ್ದೇಶಕರಾದ ಇಂದ್ರೇಶ್ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯತ್ ವತಿಯಿಂದ ದುಗುಡಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆ, ಕೃಷಿ ವಿಜ್ಞಾನ ಕೇಂದ್ರ ಮತ್ತು ತೋಟಗಾರಿಕೆ ಇಲಾಖಾ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ “ರೈತರ ನಡಿಗೆ, ಸಹಜ ಕೃಷಿಯಡೆಗೆ” ಸಂವಾದವನ್ನು ಉದ್ಘಾಟಿಸಿ ಅವರು rolex replica watches ಮಾತನಾಡಿದರು.

ಈ ಸಹಜ ಬೇಸಾಯ ಪದ್ಧತಿಯಲ್ಲಿ ನಾವು ಮೊದಲಿಗರು. ಪದ್ದತಿಯನ್ನು ಈ ಹಿಂದೆ ವಿಜ್ಞಾನಿಗಳೊಂದಿಗೆ ಚರ್ಚಿಸಿ ಸಂವಾದವನ್ನು ಮಾಡುವ ಮೂಲಕ ಸಂಶೋಧಿಸಿ ದೀರ್ಘಕಾಲ ಪರಿಣಿತರ ಶ್ರಮದಿಂದ ಪ್ರಾಯೋಗಿಕ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಒಂದು ಎಕರೆ ತೆಂಗಿನ ತೋಟ ಇರುವ ರೈತರನ್ನು ಈ ಪದ್ಧತಿಗೆ ಅಳವಡಿಸಿಕೊಳ್ಳಲು ಆಯ್ಕೆ ಮಾಡಿಕೊಳ್ಳಲಾಗಿದೆ. ದುಗುಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ 85 ರೈತರನ್ನು ಆಯ್ಕೆ ಮಾಡಲಾಗಿದೆ. ಈ ತೋಟದಲ್ಲಿ 720 ಗಿಡಗಳಾದ ಮಾವು-2,ಸಪೋಟ –2, ಸೀಬೆ-2, ಬೆಣ್ಣೆಹಣ್ಣು-2,ನಿಂಬೆ-2, ಚಕ್ಕೆ-20, ಜಾಕಾಯಿ-20, ನುಗ್ಗೆ-240, ಕೋಕೋ-120, ಬಾಳೆ-320 ಕೊಡಲಾಗುವುದು.

ಈ ಸಹಜ ಬೇಸಾಯ ಪದ್ಧತಿಯ ಉದ್ದೇಶ ಮಣ್ಣಿನ ಫಲವತ್ತತೆ ಕಾಪಾಡುವುದರ ಜೊತೆಗೆ ರೈತರಿಗೆ ಉತ್ತಮ ಆರೋಗ್ಯ ಹಾಗೂ ಆಹಾರವನ್ನು ಒದಗಿಸಿ ಕೊಡುವುದಾಗಿದೆ. ಕೃಷಿಯಲ್ಲಿ ಹೆಚ್ಚು ಯತ್ರೋಪರಕಣ ಬಳಕೆಯಿಂದ ಎಷ್ಟೆಲ್ಲ ಅನಾನುಕೂನಗಳಾಗಿವೆ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಪದ್ದತಿಯನ್ನು ನಮ್ಮ ತಾಲ್ಲೂಕಿಗೆ ನೀಡಲಾಗಿದೆ. replica watches uk ಆದಷ್ಟು ನಮ್ಮ ತಾಲ್ಲೂಕಿನ ರೈತರು ಹೆಚ್ಚಾಗಿ ಸೌಲಭ್ಯವನ್ನು ಉಪಯೋಗಿಸಿಕೊಳ್ಳಿ ಎಂದು ವಿನಂತಿಸಿಕೊಂಡರು.

ಬಳಿಕ ರೈತರಿಗೆ ಆಗುತ್ತಿರುವ ತೊಂದರೆಗಳಿಗೆ ಪರಿಹಾರವನ್ನು ನೀಡುವ ಮೂಲಕ ಸಹಜ ಕೃಷಿಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿ ಗುರುಸ್ವಾಮಿ ಅವರು, ವಿಷಯ ನಿರ್ವಾಹಕರಾದ ಉಮೇಶ್ ಅವರು, ತಾಂತ್ರಿಕ ಸಂಯೋಜಕರಾದ ನಾಗರಾಜ್ ಅವರು, ಐಇಸಿ ಸಂಯೋಜಕರಾದ ಕೆ.ಎಸ್.ರಮ್ಯ ಅವರು, ತಾಂತ್ರಿಕ ಸಹಾಯಕರಾದ ಯಶ್ವಂತ್ ಅವರು ಮತ್ತು ಹೊನ್ನೇಶ್ ಅವರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ರೈತ ಲೋಕೇಶ್, ಸಾಕಷ್ಟು ರೈತರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *