India vs England Test Series:
ಐದನೆಯ ಅಂತಿಮ ಟೆಸ್ಟ್ ಸರಣಿ ಪಂದ್ಯ ಅಮೋಘ ಪ್ರದರ್ಶನ ತೋರಿದ ಭಾರತ ಜಯಶಾಲಿಯಾಗಿ ಹೊರಹೊಮ್ಮಿದ, ಭಾರತ ಸರಣಿ 2: 2 ರಿಂದ ಸಮಬಲ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಓವಲ್‌ನಲ್ಲಿ,ಆತಿಥೇಯ ಇಂಗ್ಲೆಂಡ್ ವಿರುದ್ಧದ ‘ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ’ ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತ, ಕೈಜಾರಿದ್ದ ಗೆಲುವನ್ನು ಕೊನೇ ಕ್ಷಣದಲ್ಲಿ ಬಾಚಿಕೊಂಡಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2–2 ಅಂತರದ ಸಮಬಲ ಸಾಧಿಸಿತು.
ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ನೀಡಿದ್ದ 374 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆಂಗ್ಲರ ಪಡೆ, 367 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಇದರೊಂದಿಗೆ, ಭಾರತ 6 ರನ್ ಅಂತರದ ಜಯ ಸಾಧಿಸಿತು.
ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್ 5 ವಿಕೆಟ್ ಕಬಳಿಸಿದರೆ, ಪ್ರಸಿದ್ಧ ಕೃಷ್ಣ 4 ವಿಕೆಟ್ ಮತ್ತು ಆಕಾಶ್ ದೀಪ್ ಒಂದು ವಿಕೆಟ್ ಪಡೆದರು.
ವರದಿ : ಭರತ್ ಮಲ್ನಾಡ್