Home ರಾಜಕಾರಣ ಅರಸೀಕೆರೆ ನಗರಸಭೆಯಿಂದ ಮುಂದುವರೆದ ಸ್ವಾಗತ ಕಮಾನು ನಿರ್ಮಾಣ.

ಅರಸೀಕೆರೆ ನಗರಸಭೆಯಿಂದ ಮುಂದುವರೆದ ಸ್ವಾಗತ ಕಮಾನು ನಿರ್ಮಾಣ.

122
0

ಅರಸಿಕೆರೆಯ ಧಾರ್ಮಿಕ ಆದ್ಯಾತ್ಮಿಕ ಕೇಂದ್ರಗಳ ಬಗ್ಗೆ ಇತಿಹಾಸಗಳನ್ನು ತಿಳಿ ಹೇಳುವ ನಾಮಫಲಕ ಸ್ವಾಗತ ಕಮಾನುಗಳು ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಮುಖ ಹೆದ್ದಾರಿಗಳಲ್ಲಿ ನಿರ್ಮಾಣಗೊಂಡು ಅರಸಿಕೆರೆ ನಗರದ ಅಂದವನ್ನು ಹೆಚ್ಚಿಸಿದ್ದು ಪ್ರಯಾಣಿಕರು ಸಾರ್ವಜನಿಕರು ಸಂಘ ಸಂಸ್ಥೆಗಳ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಅರಸಿಕೆರೆ ನಗರಸಭೆಯ ಕಾರ್ಯವೈಕರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು

ಅರಸಿಕೆರೆ ಮೈಸೂರು ರಸ್ತೆಗೆ ಮತ್ತು ಅರಸಿಕೆರೆ ಹಾಸನ ರಸ್ತೆಗೆ ಶ್ರೀ ಕ್ಷೇತ್ರ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ಸ್ವಾಗತ ಕಮಾನು
ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಪ್ರತಿ ಪೌರ್ಣಿಮೆಗೆ ರಾಜ್ಯದ ಮೂಲೆ ಮೂಲೆಗಳಿಂದ ತನ್ನ ಅಪಾರಭಕ್ತ ವೃಂದವನ್ನು ಕರೆಸಿಕೊಳ್ಳುವ ಮೂಲಕ ಅಪಾರಭಕ್ತರ ಅವರವರ ಸಮಸ್ಯೆಗಳನ್ನು ಬಗೆಹರಿಸಿ ಖ್ಯಾತಿ ಪಡೆದಿರುವ ಶ್ರೀ ಕ್ಷೇತ್ರ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ಸಿದ್ದರ ನಾಡು ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ಸನ್ನಿಧಿಗೆ ಸ್ವಾಗತ ಎಂಬ ಸ್ವಾಗತ ಕಮಾನುಗಳು ಅರಸಿಕೆರೆ ಹಾಸನ ರಸ್ತೆಗೆ ಮತ್ತೆ ಅರಸೀಕೆರೆ ಚನ್ನರಾಯಪಟ್ಟಣ ರಸ್ತೆಗೆ ವಿಶ್ವವಿಖ್ಯಾತ ಶ್ರವಣಬೆಳಗೊಳ ರಸ್ತೆ ಹೊಂದಿಕೊಳ್ಳುವುದರಿಂದ ಚನ್ನರಾಯಪಟ್ಟಣದಿಂದ ಬರುವ ಪ್ರಯಾಣಿಕರಿಗೆ ಪುನಹ ಬನ್ನಿ ಗೊಮ್ಮಟನಗರಿಗೆ ಸ್ವಾಗತ ಮತ್ತು ಹಾಸನದಿಂದ ಬರುವ ಪ್ರಯಾಣಿಕರಿಗೆ ಹಾಸನದ ಅಧಿದೇವತೆ ಪುನಹ ಬನ್ನಿ ಹಾಸನಾಂಬೆಯ ಸನ್ನಿಧಿಗೆ ಸ್ವಾಗತ ಎಂಬ ಕಮಾನು ನಗರಸಭೆ ವತಿಯಿಂದ ನಿರ್ಮಾಣವಾಗುತ್ತಿದ್ದು ಇದು ಅರಸೀಕೆರೆ ಅಷ್ಟೇ ಅಲ್ಲದೆ ಹಾಸನ ಜಿಲ್ಲೆಯ ಇತಿಹಾಸ ಮತ್ತು ಖ್ಯಾತಿಯನ್ನು ಸಹ ಮಾಹಿತಿ ನೀಡಲಿದೆ ಇದರಿಂದ ಜಿಲ್ಲೆಗೆ ಮತ್ತು ಅರಸಿಕೆರೆ ತಾಲ್ಲೂಕಿಗೆ ಪ್ರವಾಸಿಗರು ಮತ್ತು ಭಕ್ತಾದಿಗಳ ಸಂಖ್ಯೆಯು ಹೆಚ್ಚಾಗಿ ಅಪಾರ ಭಕ್ತರ ಪ್ರಶಂಸೆ ವ್ಯಕ್ತವಾಗಲಿದೆ..

ವರದಿ ವಿಶುಕುಮಾರ್ ಅರಸಿಕೆರೆ.

LEAVE A REPLY

Please enter your comment!
Please enter your name here