ಆದರ್ಶಗಳ ಹಾದಿಯಲ್ಲಿ ಸಾಗಿದಾಗ ಬದುಕು ಶ್ರೇಷ್ಠ ವಾಗುತ್ತದೆ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಆದರ್ಶಗಳ ದಾರಿಯಲ್ಲಿ ಸಾಗಿದಾಗ ಬದುಕು ಶ್ರೇಷ್ಠ ವಾಗುತ್ತದೆ    ಸಾಣೆಹಳ್ಳಿ ಶ್ರೀಗಳ ನಅಭಿಮತ             ಅರಸೀಕೆರೆ ಮಾನವನ ಬದುಕು ಎಷ್ಟು ಶ್ರೇಷ್ಠವಾಗಿರುತ್ತದೆಯೋ ಅಷ್ಟೇ ಕನಿಷ್ಠವೂ ಆಗಿರುತ್ತದೆ ಎಂದು ಸಾಣೆ ಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಗುರುವಾರ ಅಭಿಮತ ವ್ಯಕ್ತಪಡಿಸಿದರು     ಅರ
ತಾಲೂಕಿನ ಕಣಕಟ್ಟೆ ಹೋಬಳಿ ರಾಂಪುರ ಗ್ರಾಮದ ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಸಹಕಾರ  ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಆರ್ ಎನ್ ಶೇಖರಪ್ಪನವರ ತಾಯಿ ಶ್ರೀಮತಿ ರಾಮಕ್ಕನವರ ಪುಣ್ಯ ಸ್ಮರಣೆ ಹಾಗೂ ಶರಣ ಸಮ್ಮೇಳನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು        ಪ್ರತಿಯೊಬ್ಬ ವ್ಯಕ್ತಿಯು ಕನಿಷ್ಠ ಬದುಕನ್ನು ತೊರೆದು ಶ್ರೇಷ್ಠ ಬದುಕನು ಸಾಗಿಸಬೇಕು ಎನ್ನುವುದೇ ಬಸವಾದಿ ಶಿವಶರಣರ ಹಾಗೂ ಹಿರಿಯ
ಗುರುಗಳ ಆಶಯವಾಗಿತ್ತು ಮನುಷ್ಯ ಹುಟ್ಟು ಮತ್ತು ಸಾವಿನ ಮಧ್ಯೆ ಈ ನಡುವಿನ ಅವಧಿಯಲ್ಲಿ ಈ ಲೋಕಕ್ಕೆ ಉತ್ತಮ ಕೊಡುಗೆಗಳನ್ನು ನೀಡುವುದು ಅತ್ಯಗತ್ಯವಾಗಿದೆ ಎಂದು ತಿಳಿದಿದ್ದರು ಭಕ್ತರು ಶ್ರೀಮಂತರಾದಾಗ ಅಹಂಕಾರ ಬೆಳೆಸಿಕೊಳ್ಳದೆ ಸತ್ಕಾರ್ಯಕ
ರ್ಯಗಳನ್ನು ಮಾಡುವುದರ ಮೂಲಕ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು ಅಲ್ಲದೆ ಸಮಾಜಕ್ಕೆ ಧಾರೆಯ
ಎರೆಯುವ ಉತ್ತಮ ಗುಣಗಳನ್ನುಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ಹೇಳಿದರು ಪಾಂಡುಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವಾನಂದ ಸ್ವಾಮೀಜಿ ಮಾತನಾಡಿಪ್ರಸ್ತುತ ದಿನಗಳಲ್ಲಿ ಯುವ ಜನತೆ ಆಧುನಿಕಜೀವನ ಶೈಲಿಗೆ ಮಾರು ಹೋಗಿ ಮೌಲ್ಯಗಳು ಮತ್ತು ಹಿರಿಯರ ಸಿದ್ಧಾಂತಗಳನ್ನು
ಗಾಳಿಗೆ ತೂರಿ ನಡೆಯುತ್ತಿರುವುದರಿಂದ ಸಮಾಜ ದಿಕ್ಕು ತಪ್ಪಿ
ತ್ರಿದೆ ಎಂದು ಸ್ವಾಮೀಜಿ ಬೇಸರ ವ್ಯಕ್ತ ಪಡಿಸಿದರು   ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ ಮಕ್ಕಳಲ್ಲಿ ಮಾತನಾಡುವ ಕಲೆಗಿಂತ ಕೇಳಿಸಿಕೊಳ್ಳುವ ಗುಣ ಬೆಳೆಯಬೇಕು ಅಂತರಂಗದ ಸತ್ಯ ಶುದ್ಧ ಪ್ರಾಮಾಣಿಕತೆ ಅಹಿಂಸೆ ಸಹಕಾರ ಮತ್ತು ಪರೋಪಕಾರದಂತಹ ಸದ್ಗುಣಗಳನ್ನ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕತೆ ಹೊಂದುತ್ತದೆ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು         ಕೋಳಗುಂದ ಕೇದಿಗೆ ಮಠದ ಜಯಚಂದ್ರ ಶೇಖರ ಸ್ವಾಮೀಜಿ ಡಿ ಎಂ ಕುರ್ಕೆ ಬೂದಿಹಾಲ್ ವಿರಕ್ತಮಠದ ಶಶಿಶೇಖರ ಸಿದ್ದ ಬಸವ ಸ್ವಾಮೀಜಿ ಉಪನ್ಯಾಸಕ ದಿಬ್ಬದಹಳ್ಳಿ ಶ್ಯಾಮಸುಂದರ್ ಮಾತನಾಡಿದರು ಸಾಧು ಲಿಂಗಾಯಿತ ಸಮಾಜದ ಮುಖಂಡ ಅಣ್ಣಾಯಕನಹಳ್ಳಿ ವಿಜಯಕುಮಾರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಹೊಸೂರ್ ಗಂಗಾಧರ್ ಉಪಸ್ಥಿತರಿದ್ದರು .ತಾಲೂಕ್ ಸಾಧು ಲಿಂಗಾಯಿತ ವೀರಶೈವ ಸಮಾಜದ ಮುಖಂಡ ಏನ್ ಜಿ ಮರಳುಸಿದ್ದ ಸ್ವಾಮಿ ನಾಗಸಮುದ್ರ ವಾಸ್ತವಿಕವಾಗಿ ಮಾತನಾಡಿದರು

Share This Article
Leave a Comment

Leave a Reply

Your email address will not be published. Required fields are marked *