ಹರ್ ಗರ್ ತಿರಂಗ ಅಭಿಯಾನ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಅರಸೀಕೆರೆಯ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ರಾಷ್ಟ್ರೀಯ ಸೇವಾಯೋಜನೆ ವತಿಯಿಂದ  ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹರ್ ಘರ್ ತಿರಂಗ ಅಭಿಯಾನದಡಿ ತಿರಂಗ ಜಾತಾವನ್ನು ಹಮ್ಮಿಕೊಂಡಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಗೀತಾ ಅವರು ಜಾತಾಕ್ಕೆ ಚಾಲನೆ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಪ್ರಾರಂಭವಾದ ಜಾತಾ ಜಾಜೂರು ಮಾರ್ಗವಾಗಿ ಹೊರಟು ಅರಸೀಕೆರೆ ತಾಲೂಕು ಆಡಳಿತ ಕಚೇರಿಯ ಮುಂಭಾಗದವರೆಗೆ ಸಾಗಿತು. ತಿರಂಗ ಯಾತ್ರೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಬಾವುಟಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಹಿಡಿದು  ವಿವಿಧ ರೀತಿಯ ರಾಷ್ಟ್ರಭಕ್ತಿಯನ್ನು ಮೂಡಿಸುವ ನಾಮಫಲಕಗಳನ್ನು ಹಿಡಿದು ರಾಷ್ಟ್ರ ಪ್ರೇಮವನ್ನ ಎತ್ತಿ ಹಿಡಿಯುವ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಜೊತೆಗೆ ವಿಶೇಷ ರೀತಿಯಲ್ಲಿ ತಿರಂಗ ಜಾತಾವನ್ನು  ಉತ್ಸಾಹದಿಂದ ನಡೆಸಿದರು ಜಾಚೂರು ಗ್ರಾಮ ಪಂಚಾಯತಿಯ ಮುಂಭಾಗದಲ್ಲಿ ಜಮಾಣಿಗೊಂಡು ದೇಶಭಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ಯ ಅಧಿಕಾರಿಗಳಾದ ಪ್ರೊ. ಕುಮಾರ್ ಅವರು ವಿಶೇಷ ಉಪನ್ಯಾಸ ನೀಡಿದರು ಈ ಅಭಿಯಾನದಲ್ಲಿ ಕಾಲೇಜಿನ ಸಿಡಿಸಿ ಸದಸ್ಯರಾದ ಓಂಕಾರ್ ಮೂರ್ತಿ ಪ್ರಾಧ್ಯಾಪಕರಾದ ಡಾ. ಶಿವಕುಮಾರ್ ಡಾ.ವಿಶ್ವನಾಥ್ ಡಾ. ಹರೀಶ್ ಮಂಜುನಾಥ್ ಪ್ರೊ.ರಾಜಶೇಖರ್ ಲೋಕೇಶ್ ಉಮಾಶಂಕರ್ ಡಾ. ಸುನಿಲ್ ಹರೀಶ್ ಮೋಹನ್ ವೀಣಾ ಪ್ರತಿಭಾ ಸೇರಿದಂತೆ ಎಲ್ಲಾ ಬೋಧಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *