ಕೋಡಿಮಠದಲ್ಲಿ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಮಾಡಾಳು  ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠಮಹಾಸಂಸ್ಥಾನದಲ್ಲಿಪೀಠಾಧ್ಯಕ್ಷರಾದ ಜಗದ್ಗುರು ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಮಾ4ರಿಂದ 6ರವರೆಗೆಮೂರು ದಿನಗಳ ಕಾಲ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಲಿದೆ                 ರಾಜ್ಯದಲ್ಲಿಯೇ ಕಲ್ಪತರು ನಾಡು ಹಾಗೂ ಸಿದ್ದರ ಬೀಡು ಎಂದೇ ಇತಿಹಾಸ ಪ್ರಸಿದ್ಧಿ ಹೊಂದಿರುವ ಪುಣ್ಯಕ್ಷೇತ್ರ ಕೋಡಿಮಠದಲ್ಲಿ ಪ್ರತಿ ತಿಂಗಳ ನಡೆಯುವ ಹುಣ್ಣಿಮೆ ಕಟ್ಟಳೆಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಪಾಲ್ಗುಣ ಮಾಸದಲ್ಲಿಮೂರು ದಿನಗಳ ಕಾಲ ನಡೆಯುವ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ ಹಾಗೂ  ಆಗಾಗ್ಗೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಭಕ್ತರಲ್ಲಿಅರಿವು ಮೂಡಿ ಸುವ ಪುರಾಣ ಪ್ರವಚನಗಳ ಮೂಲಕ ಧರ್ಮ ಸಂದೇಶಗಳನ್ನು ಮಠದಲ್ಲಿ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಈ ನಿಟ್ಟಿನಲ್ಲಿ ಕೋಡಿಮಠವು ಒಂದಾಗಿದೆ          ಅಂತೆಯೇ ಮಾ4 ರಂದು ಮಠದ ಪದ್ಧತಿಯಂತೆಹುಣ್ಣಿಮೆ ಕಟ್ಟಳೆ ಧಾರ್ಮಿಕ ಕಾರ್ಯಕ್ರಮಗಳು ಶ್ರೀಗಳಸಾನಿಧ್ಯದಲ್ಲಿ ಆರಂಭವಾಗುತ್ತವೆ ಅಂದು ಬೆಳಿಗ್ಗೆ ಕೋಡಿಮಠದಲ್ಲಿ ಹಾಗೂ ಮಹದೇಶ್ವರ ಬೆಟ್ಟದಲ್ಲಿ ಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಷಟ್ ಸ್ಥಲ ಧ್ವಜಾರೋಹಣವನ್ನುಭಕ್ತರ ಸಮ್ಮುಖದಲ್ಲಿ       ನೆರವೇರಿಸುವರು         8  ರ ಅಣ್ಣಾಯಕನಹಳ್ಳಿಹಾಗೂ ಹಾರನಹಳ್ಳಿ ಹಳ್ಯಾ ಕಟ್ಟ ಭಕ್ತರಿಂದ ಮಹಾ ಸಿಂಹಾಸನ ಪೂಜೆ ನಂತರ  ಮಾಡಾಳು ಮುದ್ದೇಗೌಡರ ವಂಶಸ್ಥರು ಹಾಗೂ ಬಂಧು ವರ್ಗದವರಿಂದ ರಜ ತ ಪಲ್ಲಕ್ಕಿಪೂಜೆ ನೆರವೇರಲಿದೆ  ಸಂಜೆ 6 ಗಂಟೆಗೆ ಶ್ರೀಗಳ ಸಾನಿಧ್ಯದಲ್ಲಿಧಾರ್ಮಿಕ ಸಮಾರಂಭ ಇರುತ್ತದೆ     ಮಾ5 ರಂದು ಜಗದ್ಗುರುಗಳು ಭಕ್ತರೊಡಗೂಡಿ ಪಾದಯಾತ್ರೆಯಲ್ಲಿ ಹಾರನಹಳ್ಳಿ  ಪುರ ಪ್ರವೇಶ ಮಾಡಿ ಭಕ್ತರ ಮನೆಯಲ್ಲಿ ಪಾದಪೂಜೆ ಮಾಡಿ ಬಿಕ್ಷಾಟನೆ ಮಾಡುವರು ರಾತ್ರಿ 8:00 ಗಂಟೆಗೆ ಮಹದೇಶ್ವರ ಬೆಟ್ಟದಲ್ಲಿ ಜಡೆ ಸಂಸ್ಥಾನ ಮಠದಮಹಾಂತ ಶಿವಯೋಗಿಗಳ ಪಾದಪೂಜೆ ನಡೆಯಲಿದೆ            ಮಾ6ರಂದು ಶುಕ್ರವಾರ ವಿವಿಧ ಕಲಾತಂಡಗಳೊಂದಿಗೆ  ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಬೆಳ್ಳಿ ಪಲ್ಲಕ್ಕಿಯಲ್ಲಿ ಹಾರನಹಳ್ಳಿ ಗ್ರಾಮಕ್ಕೆ ತೆರಳಿ ಭಕ್ತರ ಸಮ್ಮುಖದಲ್ಲಿ ಉತ್ಸವ ನಡೆಯಲಿದೆ ನಂತರ ಪಲ್ಲಕ್ಕಿ ಉತ್ಸವದೊಡನೆ ಮಹದೇಶ್ವರ ಬೆಟ್ಟಕ್ಕೆ ತೆರಳುವುದು ಅಲ್ಲಿ ಹೆಜ್ಜೆ ನಮಸ್ಕಾರ ಮಹಿಳೆಯರಿಂದ ಗೂಗ್ಗಳೋತ್ಸವ ಹಾಗೂ ಮುತ್ತೈದೆಯರ ಸೇವೆ ಜರುಗಲಿದ್ದು ಶ್ರೀಗಳು ಲಿಂಗಾನು ಲಿಂಗ ಪೂಜಾ ಅನುಷ್ಠಾನ ಮಾಡುವರು ”             ಮಹದೇಶ್ವರ ರ ಪವಾಡ    ಪ್ರಸಾದ                      ಶ್ರೀಗಳ ಪೂಜೆಯ ನಂತರ ಬಂದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಇರುತ್ತದೆ ಪ್ರಸಾದ ಮುಗಿದ ನಂತರ ಉಳಿದ ಅನ್ನವನ್ನು ಅಲ್ಲೇ ಇರುವ ಪ್ರಸಾದದ ಗುಂಡಿಗೆ  ವಿಸರ್ಜಿಸಿ ಗುಂಡಿಯ ಮೇಲ್ಭಾಗಕ್ಕೆ ಹಾಸುಗಲ್ಲು ಹಾಕಿ ಮಣ್ಣಿನಿಂದ ಮುಚ್ಚುವರು ಆದರೆ ಮುಂದಿನ ವರ್ಷ ಜಾತ್ರೆ ಬಂದಾಗ ಗುಂಡಿ ಮುಚ್ಚಳವನ್ನು ತೆಗೆದರೆ ಕಳೆದ ಬಾರಿ ಹಾಕಿದ ದಾಸೋಹ ಯಾವುದೇ ಹಾನಿ ಹಾಗೂ ಕೆಡದಂತೆ ಆಗತಾನೆ ಹಾಕಿರುವ ರೀತಿಯಲ್ಲಿ ಇರುತ್ತದೆ.ಇದು ಮಹದೇಶ್ವರರ ಪವಾಡ ಎಂದು ಭಕ್ತರು ಹೇಳುತ್ತಾರೆ       ಸಂಜೆ 6 ಗಂಟೆಗೆ ಶಿವಾನಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ ಧಾರ್ಮಿಕ  ಕಾರ್ಯಕ್ರಮ ಜರುಗಲಿದ್ದು ಸಮಾರಂಭದಲ್ಲಿ ನಾಡಿನ ವಿವಿಧ ಮಠಾಧೀಶರು ಶಾಸಕರು ಮಾಜಿ ಶಾಸಕರು ಸಾಹಿತಿಗಳು ವಿದ್ವಾಂಸರು ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ

     ವರದಿ ಮಾಡಾಳು ನಂದೀಶ ಕುಮಾರ

Share This Article
Leave a Comment

Leave a Reply

Your email address will not be published. Required fields are marked *