Home ರಾಜಕಾರಣ ಪಡಿತರ ವಿತರಕರ ಸಮಾವೇಶಕ್ಕೆ ಅರಸಿಕೆರೆ ತಾಲ್ಲೂಕು ವತಿಯಿಂದ ಹೊರಟ ನ್ಯಾಯಬೆಲೆ ಅಂಗಡಿ ಮಾಲೀಕರು

ಪಡಿತರ ವಿತರಕರ ಸಮಾವೇಶಕ್ಕೆ ಅರಸಿಕೆರೆ ತಾಲ್ಲೂಕು ವತಿಯಿಂದ ಹೊರಟ ನ್ಯಾಯಬೆಲೆ ಅಂಗಡಿ ಮಾಲೀಕರು

25
0

ಉಮೇಶ್ ಬಾಣಾವರ ಪ್ರಧಾನ ಸಂಪಾದಕರು ಎಚ್ವಿ ನ್ಯೂಸ್

ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಚಲನಚಿತ್ರ  ಟೀಸರ್ ಬಿಡುಗಡೆ ಸಮಾರಂಭ ಮತ್ತು ಪಡಿತರ ವಿತರಕರ ಸಮಾವೇಶ ಇಂದು ನಡೆಯುತ್ತಿದ್ದು  ಈ ಕಾರ್ಯಕ್ರಮಕ್ಕೆ ಅರಸೀಕೆರೆ ತಾಲೂಕಿನ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷರಾದ ವೇದಮೂರ್ತಿ  ಉಪಾಧ್ಯಕ್ಷರಾದ ಶಿವರಾಜ್  ಕಾರ್ಯದರ್ಶಿ ರಾಮಸ್ವಾಮಿ ಸೇರಿದಂತೆ ಸಂಘದ ಮುಖಂಡರು ಹಾಗೂ ನ್ಯಾಯ ಬೆಲೆ ಅಂಗಡಿ ಮಾಲೀಕರು ಇಂದು ಬೆಳಗ್ಗೆ ಅರಸಿಕೆರೆ ರೈಲ್ವೆ ನಿಲ್ದಾಣದಿಂದ ಹೊರಟರು

ಸಮಾರಂಭಕ್ಕೆ ಆಗಮಿಸಲಿರುವ ಕೇಂದ್ರ ಆಹಾರ ಸಚಿವರಾದ  ಪ್ರಹ್ಲಾದ್ ಜೋಶಿ ಮತ್ತು ಕರ್ನಾಟಕ ರಾಜ್ಯ ಸರ್ಕಾರದ  ಆಹಾರ ನಾಗರಿಕ ಸರಬರಾಜು ಸಚಿವರಾದ ಕೆಎಚ್ ಮುನಿಯಪ್ಪ

ಇಂದು ನಡೆಯಲಿರುವ ಸಮಾರಂಭಕ್ಕೆ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರದ ಟೀಸರ್ ಬಿಡುಗಡೆ ಮತ್ತು ಪಡಿತರ ವಿತರಕರ ಕ್ಯಾಲೆಂಡರ್ ಬಿಡುಗಡೆ ಹಾಗೂ ಪಡಿತರ ವಿತರಕರ ಸಮಾವೇಶಕ್ಕೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಪ್ರಹ್ಲಾದ್ ಜೋಶಿ ಹಾಗೂ ಕರ್ನಾಟಕ ಸರ್ಕಾರದ ಆಹಾರ ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ಕೆಎಚ್ ಮುನಿಯಪ್ಪ ಭಾಗವಹಿಸಲಿದ್ದು ಕರ್ನಾಟಕ ರಾಜ್ಯ ಸರ್ಕಾರದ 20,000ಕ್ಕೂ ಹೆಚ್ಚು ಪಡಿತರ ವಿತರಕರ ಹಲವರು ಸಮಸ್ಯೆಗಳನ್ನು ಸಹ  ಸರ್ಕಾರಕ್ಕೆ ಮನವಿ ರೂಪದಲ್ಲಿ ಪಡೆಯಲಿದ್ದಾರೆ ಎಂದು  ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯಧ್ಯಕ್ಷ ಕೃಷ್ಣಪ್ಪ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here