ಕಾರು ಚಾಲಕರು ಹಾಗೂ ಮಾಲೀಕರಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!


ಅರಸೀಕೆರೆ : ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಜೈ ಭುವನೇಶ್ವರಿ ಮಾತ ಕಾರು ಮಾಲೀಕರು ಹಾಗೂ ಚಾಲಕರ ಸಂಘದಿಂದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಧ್ವಜಾರೋಹಣ ಮಾಡುವ ಮುಖಾಂತರ ಶಾಸಕ ಹಾಗೂ ಗೃಹ ಮಂಡಳಿಯ ಅಧ್ಯಕ್ಷ ಕೆಎಂ ಶಿವಲಿಂಗೇಗೌಡ ಉದ್ಘಾಟಿಸಿ ಮಾತನಾಡಿ
ಕನ್ನಡ ನಾಡಿನ ಸಾಂಸ್ಕೃತಿಕ ಹಬ್ಬವನ್ನು  ಅತಿ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೀರಾ ಕಳೆದ 15 ದಿನಗಳಿಂದಲೂ ಆಟೋ ಚಾಲಕರು ವಿವಿಧ ಸಂಘ ಸಂಸ್ಥೆಗಳು ಶಾಲಾ ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯುತ್ತಿದೆ ನಾವು ಕನ್ನಡ ನಾಡಿನ ಸಂಸ್ಕೃತಿಯನ್ನು ಭಾಷೆ, ನೆಲ, ಜಲವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ನಮ್ಮ ಕನ್ನಡ ನಾಡು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು. ರಾಷ್ಟ್ರಕವಿ ಕುವೆಂಪುರವರು ಹೇಳಿದಂತೆ, ನಮ್ಮ ಕರುನಾಡು ಸುಂದರ ನದಿ ವನಗಳ ನಾಡು. ರಸಋಷಿಗಳ ಬೀಡು. ಗಂಧದ ಚಂದದ ಹೊನ್ನಿನ ಗಣಿ. ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರ ಮಧ್ವರ, ರನ್ನ ಷಡಕ್ಷರಿ ಪೊನ್ನ, ಪಂಪ ಜನ್ಮಿಸಿದ ನಾಡು. ಕರುನಾಡಿನ ಬಗ್ಗೆ ಹೇಳಲು ಸಮಯವೇ ಸಾಲದು.
ನೀವು ಚಾಲಕರುಗಳು ಶ್ರಮಜೀವಿಗಳು ಕಷ್ಟಪಟ್ಟು ಕೆಲಸ ಮಾಡುವ ನೀವುಗಳು ಒಗ್ಗಟ್ಟಿನಿಂದ ಇರಬೇಕು ನಿಮಗೆ ಎಲ್ಲ ರೀತಿಯ ಸಹಕಾರವನ್ನು ನಾನು ನೀಡುತ್ತೇನೆ ಎಂದರು
ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕರವೇ ಜಿಲ್ಲಾ  ಉಪಾಧ್ಯಕ್ಷ ಹೇಮಂತ್ ಕುಮಾರ್ ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸ್ಥಿತಿ ಬದಲಾಗಿದೆ.   ನಮ್ಮ ಕನ್ನಡದ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಕನ್ನಡಿಗರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ. ಇಂದು ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಕನ್ನಡದ ಉಳಿವಿಗಾಗಿ ಎಲ್ಲರೂ ಹೋರಾಡೋಣ. ಕೇವಲ ಈ ದಿನ ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿಸಿದಂತೆ ಆಗುವುದಿಲ್ಲ. ಕನ್ನಡ ನಮ್ಮ ಉಸಿರಾಗಿರಬೇಕು.  ವ್ಯಾಪಾರದ ಸ್ಥಳದಲ್ಲಿ ಶೇಕಡ 70ರಷ್ಟು ಕನ್ನಡ ಬಳಕೆಯಾಗಬೇಕು ಸರ್ಕಾರ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎಂದರು ಕಾರ್ಯಕ್ರಮದಲ್ಲಿ ಪಂಚಾಯತಿ ಮಾಜಿ ಸದಸ್ಯ ಮಾಡಾಳು ಸ್ವಾಮಿ ಉಪಸ್ಥಿತರಿದ್ದರು
ಮಧ್ಯಾಹ್ನ ಎಲ್ಲರಿಗೂ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಕನ್ನಡ ರಾಜ್ಯೋತ್ಸವವು ಕೇವಲ ಒಂದು ಹಬ್ಬವಲ್ಲ ಇದು ನಮ್ಮ ಭಾಷೆಯ ಗೌರವ, ಸಂಸ್ಕೃತಿ, ಮತ್ತು ಒಗ್ಗಟ್ಟಿನ ಸಂಕೇತವಾಗಿದೆ. ಈ ದಿನ ನಾವು ನಮ್ಮ ಕನ್ನಡ ಧ್ವಜವನ್ನು ಗೌರವದಿಂದ ಹಾರಿಸುತ್ತೇವೆ, “ಜಯ ಭಾರತ ಜನನಿಯ ತನುಜಾತೆ” ಎಂಬ ರಾಜ್ಯಗೀತೆ ಹಾಡುತ್ತೇವೆ, ಮತ್ತು ಕನ್ನಡ ನಾಡಿನ ವೀರರು ಹಾಗೂ ಕವಿಗಳನ್ನು ಸ್ಮರಿಸುತ್ತೇವೆ.
ನೀವೆಲ್ಲ ಚಾಲಕರು ಈ ರಾಜ್ಯೋತ್ಸವಕ್ಕಾಗಿ ನಿಮ್ಮ ಕೆಲಸಕ್ಕೆ ವಿರಾಮ ನೀಡಿ ಒಳ್ಳೆಯ ಕಾರ್ಯಕ್ರಮ ಮಾಡುತ್ತಿದ್ದೀರಾ ನಿಮ್ಮೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು ಎಂದರು
ಕಾರ್ಯಕ್ರಮದಲ್ಲಿ ಕರವೇ ಯುವ ಮುಖಂಡ ದಿಲೀಪ್ ಕುಮಾರ್ ಭುವನೇಶ್ವರಿ ಕಾರು ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ತೇಜಸ್ ಹಾಗೂ ಅರಸೀಕೆರೆ ತಾಲೂಕು ಡಿ ಕೆ ಶಿವಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ದೇವರಾಜ್  ಪ್ರಸಾದ್ ಪುನೀತ್ ಅಪ್ಸರ್ ಗಿರೀಶ್ ಸ್ವಾಮಿ ಧರ್ಮ ಕುಮಾರ್ ಮುಂತಾದವರಿದ್ದರು

Share This Article
Leave a Comment

Leave a Reply

Your email address will not be published. Required fields are marked *