ರೈಲ್ವೆ ನೌಕರರ ಕನ್ನಡ ಬಳಗದ ವತಿಯಿಂದ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!


ಅರಸೀಕೆರೆ: ರೈಲ್ವೆ ನೌಕರರ ಕನ್ನಡ ಬಳಗದ ವತಿಯಿಂದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಜೀವ ಸಂಜೀವಿನಿ ರಕ್ತಕೇಂದ್ರ ಹಾಸನ ಇವರ ಆಶ್ರಯದಲ್ಲಿ ರಕ್ತದಾನ  ಶಿಬಿರದಲ್ಲಿ ನೂರಾರು ನೌಕರರು ರಕ್ತದಾನ ಮಾಡಿದರು ನಂತರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಹಾಯಕ ವಿಭಾಗೀಯ ಅಭಯಂತರರಾದ ಬಿಜಾಪುರಂ ಬಶೀರ್ ರೈಲ್ವೆ ನೌಕರರೆಲ್ಲರೂ ಸೇರಿ ಸಂತೋಷದಿಂದ ಹಬ್ಬದ ರೀತಿಯಲ್ಲಿ ಆಚರಿಸುವ ಕನ್ನಡ ರಾಜ್ಯೋತ್ಸವ ಕನ್ನಡ ಸಾಲನ್ನು ಧರಿಸಿ ರೈಲ್ವೆ ನಿಲ್ದಾಣವನ್ನು ತಳ್ಳಿರು ತೋರಣ ಗಳಿಂದ ಶೃಂಗಾರ ಮಾಡಿ ಹಬ್ಬದ ರೀತಿಯಲ್ಲಿ ಎಲ್ಲಾ ಭಾಷೆಯ ನೌಕರರು ಸಹ ಆಚರಣೆ ಮಾಡುತ್ತಿದ್ದು ಸಂತೋಷ ತಂದಿದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಲಕದಳ ನಿಯಂತ್ರಕರರಾದ ಎಸ್ ಕೆ  ಸ್ವರ್ಣಾಕರ್ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇಲ್ಲಿನ ಜನ ಇಲ್ಲಿನ ಸಂಸ್ಕೃತಿ  ಆಚಾರ-ವಿಚಾರಗಳು ಉತ್ತಮವಾಗಿವೆ ನಾನು ಇಲ್ಲಿ ವಾಸ ಮಾಡಲು ತುಂಬಾ ಇಷ್ಟಪಡುತ್ತೇನೆ ಇಲ್ಲಿನ ಪ್ರೀತಿ ವಿಶ್ವಾಸ ನಮಗೆ ನೀಡುವ ಗೌರವ  ಎಲ್ಲವೂ ನಮಗೆ ತುಂಬಾ ಇಷ್ಟವಾಗಿದ್ದು ಕರ್ನಾಟಕದಲ್ಲಿ ಕೆಲಸ ಮಾಡೋದು ನನ್ನ ಪುಣ್ಯ ಎಂದು ತಿಳಿಸಿದರು ಕರವೇ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ ಕೇವಲ ಅಭಿಮಾನದಿಂದ ಕನ್ನಡ ಭಾಷೆಯ ರಕ್ಷಣೆ ಸಾಧ್ಯವಿಲ್ಲ. ಪ್ರತಿಯೊಬ್ಬ ಕನ್ನಡಿಗನೂ ರಾಜ್ಯದಲ್ಲಿ ಕನ್ನಡದಲ್ಲೇ ಮಾತನಾಡುವ, ವ್ಯವಹರಿಸುವ ಪ್ರತಿಜ್ಞೆಗೈಯ್ಯೋಣ. ಕನ್ನಡವನ್ನು ಬಳಸೋಣ, ಬೆಳೆಸೋಣ ನಾಡು-ನುಡಿ ನೆಲ ಜಲವನ್ನು ರಕ್ಷಿಸುವ ಕಾರ್ಯದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ನಾರಾಯಣಗೌಡರು ಲಕ್ಷಾಂತರ ಯುವಕರಿಗೆ ಕನ್ನಡ ದೀಕ್ಷೆಯನ್ನು ನೀಡಿದ್ದಾರೆ ನಾಮಫಲಕಗಳಲ್ಲಿ ಕನ್ನಡ ಬಳಕೆ ಉದ್ಯೋಗದಲ್ಲಿ ಕನ್ನಡ ಮೀಸಲಾತಿ ಸರ್ಕಾರ ಜಾರಿಗೆ ತರಬೇಕು ಎಂದರು. ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ರವಿ, ಮಂಜುನಾಥ್, ರಂಗಸ್ವಾಮಿ ಮುಂತಾದವರಿಗೆ ಸನ್ಮಾನಿಸಿ ಗೌರವಿಸಲಾಯಿತು ಕಾರ್ಯಕ್ರಮದ ವೇದಿಕೆಯಲ್ಲಿ ಪೊಲೀಸ್ ನಿರೀಕ್ಷಕರರಾದ ರಾಕೇಶ್ ಕುಮಾರ್
ಹಿರಿಯ ನಿಲ್ದಾಣ ವ್ಯವಸ್ಥಾಪಕರಾದ
ಪಾಸ್ವಾನ್  ಅಭಯಂತರರುಗಳದಾದ‌
ಪ್ರಸಾದ್ ಮತ್ತು
ಕೆ ಪಿ ನಾಯ್ಡು ರೈಲ್ವೆ ಉಪ-ಪೊಲೀಸ್ ನಿರೀಕ್ಷಕರಾದ
ಗವಾಸ್ಕರ್  ಕನ್ನಡ ರಾಜ್ಯೋತ್ಸವವನ್ನು ಕುರಿತು ಮಾತನಾಡಿದರು.  ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರೈಲ್ವೆ ಕನ್ನಡ ನೌಕರ ಸಂಘದ
ಅಧ್ಯಕ್ಷರಾದ ಮಂಜುನಾಥ್ ಸಿ. ಲೋಕೋ ಪೈಲೆಟ್ ಪ್ಯಾಸೆಂಜರ್.
ಸಂಘದ ಸದಸ್ಯರುಗಳಾದ
ಪ್ರಕಾಶ್ ನಾಯಕ್
ಪ್ರವೀಣ್ ಕುಮಾರ್ ಬಿ.ಕೆ.
ಹರೀಶ
ಆನಂದ
ಗಂಗಾಧರ ಎಂ ಸಿ
ಯೋಗೇಶ್ ಜಿಕೆ
ನಾಗರಾಜು ವೈ
ಯಶೋಧಮೂರ್ತಿ
ಹರೀಶ ಆರ್
ಇನ್ನು ಮುಂತಾದವರಿದ್ದರು

Share This Article
Leave a Comment

Leave a Reply

Your email address will not be published. Required fields are marked *