ಅರಸೀಕೆರೆ ನಗರದ ನಾಗರಿಕರಿಗೆ ನಗರಸಭೆ ಆಗಿರುವ ಅಭಿವೃದ್ಧಿ ಕಾರ್ಯಕ್ರಮ ಗಳಾದ ಈಜುಕೊಳ ಐಡಿಎಸ್‌ಎಮ್‌ಟಿ ಯೋಜನೆಯೆಲ್ಲಿ ತರಕಾರಿ ಮಾರುಕಟ್ಟೆ ನಗರೋತ್ತಾನ ಯೋಜನೆ ಅಡಿಯಲ್ಲಿ ವಾಣಿಜ್ಯ ಸಂಕೀರ್ಣ ಮತ್ತು ನಗರದ ಬಡ ಕುಟುಂಬಗಳಿಗೆ ಪ್ರಥಮ ಹಂತವಾಗಿ 300 ಕುಟುಂಬಗಳಿಗೆ ಮನೆಗಳ ಸ್ವಾಧೀನ ವಿತರಣೆ ಹೀಗೆ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ದಿನಾಂಕ 26ರಂದು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್. ಸೇರಿದಂತೆ ನಗರಾಭಿವೃದ್ಧಿ ಸಚಿವರು ವಸತಿ ಸಚಿವರು ಕಾರ್ಮಿಕ ಸಚಿವರು ಸೇರಿದಂತೆ ಇನ್ನೂ ಹಲವಾರು ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಅರಸೀಕೆರೆ ತಾಲೂಕಿನ ಸಾರ್ವಜನಿಕರು ಮತ್ತು ನಗರದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಭಾಗವಹಿಸಬೇಕೆಂದು ನಗರಸಭೆ ಅಧ್ಯಕ್ಷರಾದ ಎಮ್ ಸಮೀವುಲ್ಲಾ ತಿಳಿಸಿದರು ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ವಿಶೇಷವಾಗಿ ಅರಸೀಕೆರೆ ತಾಲೂಕಿನ ಪ್ರಮುಖ ಬೆಳೆಯಾಗಿರುವ ತೆಂಗಿಗೆ ರೋಗಭಾದೆ ಕಾಡುತ್ತಿದ್ದು ಈ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಅರಸೀಕೆರೆ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಗೃಹ ಮಂಡಳಿ ಅಧ್ಯಕ್ಷರಾದ ಕೆಎಂ ಶಿವಲಿಂಗೇಗೌಡರು ವಿಶೇಷವಾಗಿ ಸರ್ಕಾರದ ಗಮನ ಸೆಳೆಯಲಿದ್ದು ತಾಲೂಕಿನ ರೈತರು ಸಹ ಹೆಚ್ಚಿನ ರೀತಿಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ನಗರಸಭೆಯ ಅಧ್ಯಕ್ಷರಾದ ಎಮ್ ಸಮೀವುಲ್ಲಾ ತಿಳಿಸಿದರು..

