Home ರಾಜಕಾರಣ ಸಕಲೇಶಪುರ ಪಟ್ಟಣದಲ್ಲಿ ಕಾಯಕಯೋಗಿ ಶರಣ ಶ್ರೀ ನುಲಿಯ ಚಂದ್ರಯ್ಯ ಜಯಂತಿ ಆಚರಣೆ.

ಸಕಲೇಶಪುರ ಪಟ್ಟಣದಲ್ಲಿ ಕಾಯಕಯೋಗಿ ಶರಣ ಶ್ರೀ ನುಲಿಯ ಚಂದ್ರಯ್ಯ ಜಯಂತಿ ಆಚರಣೆ.

21
0

ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ವತಿಯಿಂದ ಸಕಲೇಶಪುರ ಪಟ್ಟಣದಲ್ಲಿ ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಇಂದು ಜರಗಿತು.

11ನೇ ಶತಮಾನದ ಕಾಲಘಟ್ಟದಲ್ಲಿ ವಚನಗಳು ಸಾಮಾನ್ಯ ಜನರ ನಾಡಿ ಮಿಡಿತಗಳಾಗಿ ವೈಚಾರಿಕ ಮತ್ತು ವೈಜ್ಞಾನಿಕ ಮನೋ ಚಿಂತನೆಗೆ ತಮ್ಮ ಕಾಯಕದ ಮೂಲಕ ಮಹತ್ವವನ್ನು ನೀಡಿದವರು ಶಿವಶರಣರು.
ಬಸವಣ್ಣನವರ ವಿಚಾರಧಾರೆಯಿಂದ ಪ್ರಭಾವಿತರಾಗಿ ಕ್ರಿಸ್ತಶಕ 1060ರಲ್ಲಿ ಕಲ್ಯಾಣದ ಶಿವ ಅನುಭವ ಮಂಟಪಕ್ಕೆ ಸೇರಿದರು. 12ನೇ ಶತಮಾನದ ಕನ್ನಡ ನಾಡಿನ ಚರಿತ್ರೆಯಲ್ಲಿ ಅತ್ಯಂತ ಗಮನಹರವಾದ ಕಾಲ, ಶತಮಾನಗಳಿಂದ ಉಳ್ಳವರ ವೃಕ್ಷ ಬಹುಗಳಲ್ಲಿ ಬಂಧಿಯಾಗಿ ಶೋಷಣೆಯ ಬದುಕು ಸಾಗಿಸುತ್ತಿದ್ದ ಜನಸಮುದಾಯಕ್ಕೆ ಜೀವಜಲವಾಗಿ ಬಂದ ಬಸವಾದಿ ಶರಣರು ಕೆಲವರ್ಗದ ಜನರಲ್ಲಿ ಆತ್ಮಅಭಿಮಾನ ತುಂಬಿದರಲ್ಲದೆ ಅವರು ಸಮಾಜದಲ್ಲಿ ಗೌರವಯುತವಾಗಿ ತಲೆಯೆತ್ತಿ ಬದುಕುವಂತೆ ಮಾಡಿದರು.ನಾಡಿನ ಇತಿಹಾಸದಲ್ಲಿ ಇದೊಂದು ಮಹತ್ವದ ಕಾಲಘಟ್ಟ. ಬಸವಾದಿ ಪ್ರಥಮರು ಕಾಯಕ ಸಿದ್ಧಾಂತಕ್ಕೆ ಆದ್ಯತೆ ನೀಡಿ ಆ ಮೂಲಕ ದುಡಿಯುವ ವರ್ಗ ಅಥವಾ ಕಾಯಕ ಸಮಾಜದ ಔನ್ಯತ್ಯಕ್ಕೆ ತಮ್ಮ ವಚನ ಸಾಹಿತ್ಯದ ಮೂಲಕ ಶ್ರಮಿಸಿದರು..

. ವ್ಯಕ್ತಿಯ ಯೋಗ್ಯತೆ ಹುಟ್ಟಿನಿಂದ ನಿರ್ಧಾರವಾಗಬಾರದು. ಅವನ ಗುಣಗಳಿಂದ ಮಾತ್ರ ನಿರ್ಧಾರವಾಗಬೇಕು ಎಂದು ಶರಣರು ಬಯಸಿದರು. ಈ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಕ್ರಾಂತಿಗೆ ನಿಸ್ಸಂದೇಹವಾಗಿ ಬಸವಣ್ಣನವರೆ ಅವರೊಂದಿಗೆ ಕೈಜೋಡಿಸಿದ ಸಾವಿರಾರು ಶರಣರು ತಮ್ಮ ಚಿಂತನೆ ಕಾಯಕಗಳ ಮೂಲಕ ಬಸವಣ್ಣನ ಸಮಗ್ರ ಕ್ರಾಂತಿಯಲ್ಲಿ ಸಹಭಾಗಿಗಳಾದರು ಇಂಥ ಶರಣರ ಪೈಕಿ ಸಮಕಾಲಿನರಾದ ಕಾಯಕಯೋಗಿ ನುಲಿಯ ಚಂದಯ್ಯ ನವರು ಶ್ರಮ ಹಾಗೂ ಕಾಯಕ ಸಂಸ್ಕೃತಿಯನ್ನು ನಂಬಿದವರು. ಸದಾ ಕಾಯಕ ಮತ್ತು ದಾಸೋಹ ಪರಿಕಲ್ಪನೆಯಲ್ಲಿ ತನ್ಮಯರಾಗಿದ್ದರು ಎಂದು ಶಾಸಕರ ಸಿಮೆಂಟ್ ಮಂಜು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ, ಜನಪ್ರತಿನಿಧಿಗಳು, ಸಮುದಾಯ ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ: ಭರತ್ ಮಲ್ನಾಡ್

LEAVE A REPLY

Please enter your comment!
Please enter your name here