ಅರಸೀಕೆರೆ: ತಾಲೂಕು ಅಂಬಿಗರ ಚೌಡಯ್ಯ ಮತ್ತು ಗಂಗಾಮತಸ್ಥರ ಸಂಘದ ತಾಲೂಕು ಅಧ್ಯಕ್ಷರಾಗಿ ಡಿ ಲಕ್ಷ್ಮಣ್ ಆಯ್ಕೆಯಾದರು ನಗರದ ಶ್ರೀ ಗಂಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಗಂಗಾಮತಸ್ಥರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಮಾಜದ ಹಿರಿಯ ಮುಖಂಡರುಗಳಾದ ಕೇಶವಮೂರ್ತಿ ಜಿ ಎಸ್ ವಿಜಯ್ ಕುಮಾರ್ ಜಾಜುರು ಸಿದ್ದೇಶ್ ಇತರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನೂತನವಾಗಿ ಅಧ್ಯಕ್ಷರನ್ನಾಗಿ ಮಾಡುವುದರ ಕುರಿತು ಚರ್ಚೆ ನಡೆಸಲಾಯಿತು ನಂತರ ನಿವೃತ್ತ ಪೊಲೀಸ್ ಅಧಿಕಾರಿಯು ಆಗಿರುವ ಡಿ ಲಕ್ಷ್ಮಣ್ ರವರನ್ನು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಜಾವಗಲ್ ರವಿಕುಮಾರ್ ಮತ್ತು ಸತೀಶ್ ಕಣಕಟ್ಟೆ ಕಾರ್ಯದರ್ಶಿಯಾಗಿ ಬೆಲ್ಲದ ಪುಟ್ಟಸ್ವಾಮಿ ಖಜಾಜಿಯಾಗಿ ಜಾಜುರು ಸಿದ್ದೇಶ್ ಸಂಘಟನಾ ಕಾರ್ಯದರ್ಶಿಯಾಗಿ ಸುಭಾಷ್ ಹಾಗೂ ಇತರ 13 ಜನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಆಯ್ಕೆಯಾದ ಡಿ ಲಕ್ಷ್ಮಣ್ ರವರು ಮಾತನಾಡಿ ಅರಸೀಕೆರೆ ತಾಲೂಕಿನಲ್ಲಿ ಗಂಗಾಮತಸ್ಥರ ಸಮಾಜದ ಸಂಘಟನೆ ಮಾಡಿ ಎಲ್ಲಾ ನಮ್ಮ ಸಮಾಜ ಬಾಂಧವರನ್ನು ಒಗ್ಗೂಡಿಸಿ ಶೈಕ್ಷಣಿಕ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ನಾವುಗಳು ಸಂಘಟಿತವಾಗದ ಹೊರತು ಸಮಾಜದ ಬೆಳವಣಿಗೆ ಅಸಾಧ್ಯ ಹಿರಿಯರೆಲ್ಲರೂ ಸೇರಿ ಸಮಾಜವನ್ನು ಸದೃಢವಾಗಿ ಕಟ್ಟಿ ಬೆಳೆಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು
