Home ರಾಜ್ಯ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ನೂತನ ದೇವಾಲಯದ ಕಟ್ಟಡ ಕಾಮಗಾರಿಗೆ...

ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ನೂತನ ದೇವಾಲಯದ ಕಟ್ಟಡ ಕಾಮಗಾರಿಗೆ ಹಾರನಹಳ್ಳಿ ಸುಕ್ಷೇತ್ರ ಕೊಡಿ ಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಪಾದಪೂಜೆಯೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರಾವಣ ಪಂಚಮಿ ಸೋಮವಾರದಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಾಸ್ತ್ರೋತ್ರವಾಗಿ ನೆರವೇರಿತು ಹಾರನಹಳ್ಳಿ ಕೋಡಿ ಮಠ ಮಹಾಸಂಸ್ಥಾನದ ವತಿಯಿಂದ ಜಗದ್ಗುರು ಡಾ ಶ್ರೀ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರ ಸಂಕಲ್ಪದಂತೆ ಭಕ್ತರ ಸಮರ್ಪಣಾ ಮನೋಭಾವ ಹಾಗೂ ಆಶಯದಂತೆ ಸುಮಾರು ಅಂದಾಜು 1.50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಪೂಜಾ ವಿಧಿ ವಿಧಾನಗಳ ನಂತರ ಮಾತನಾಡಿದ ಶ್ರೀ ಗಳು ಸತ್ಯ ಶುದ್ಧ ಕಾಯಕದೊಂದಿಗೆ ಮನುಷ್ಯ ಜೀವನ ನಡೆಸಬೇಕು ಧರ್ಮ ಆಚರಣೆಯಿಂದ ವಿಮುಖನಾದರೆ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದರು ಶಾಂತಿ ನೆಮ್ಮದಿ ಸಮೃದ್ಧಿ ಬದುಕಿಗಾಗಿ ಧರ್ಮಾಚರಣೆ ಅಗತ್ಯ ಎಂದು ಸ್ವಾಮೀಜಿ ಪ್ರತಿಪಾದಿಸಿದರು. ಇಂದು ಎಲ್ಲಾ ರಂಗಗಳಲ್ಲಿ ಧಾರ್ಮಿಕ ಸಾಮಾಜಿಕ ಸಂಬಂಧಗಳು ಶಿಥಿಲಗೊಂಡು ಉಳಿಯುತ್ತಿಲ್ಲ ಆದ್ದರಿಂದ ಸತ್ಯದ ತಳಹದಿಯ ಮೇಲೆ ಹಾಗೂ ಸೈದ್ಧಾಂತಿಕ ನೆಲಗಟ್ಟಿನಡಿ ಗಟ್ಟಿಗೊಳಿಸಬೇಕಾಗಿದೆ ಅಂದುಕೊಂಡಂತೆ ಎಲ್ಲಾ ಕೆಲಸಗಳು ಆದರೆ ಕೋಡಿಮಠ ಶ್ರೀಗಳ ಮಾರ್ಗದರ್ಶನದಲ್ಲಿ ಮುಂದಿನ ಶ್ರಾವಣದ ಪಂಚಮಿಯಂದು ನೂತನ ದೇವಾಲಯದಲ್ಲಿ ಸ್ವರ್ಣ ಗೌರಮ್ಮ ದೇವಿಯು ದರ್ಶನ ನೀಡುವಳು ಎಂದು ಹೇಳಿದರು. ಗೌರಮ್ಮ ದೇವಿಮೂಲ ಸನ್ನಿಧಿಯಲ್ಲಿ ಶ್ರೀಗಳವರ ಇಷ್ಟಲಿಂಗ ಪೂಜೆ ಮತ್ತು ಮುತ್ತೈದೆಯವರಸೇವೆಯನ್ನು ಮಹಿಳೆಯರು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.

43
0

LEAVE A REPLY

Please enter your comment!
Please enter your name here