
Home ರಾಜಕಾರಣ “ಸದಾ ಜನಪರ ಕಾಳಜಿಯ ಶಾಸಕರು” ಮತ್ತು”ವಿಶೇಷ ಚೇತನನ ವಿಶಿಷ್ಟ ಕಾಳಜಿ”ಕ್ಷೇತ್ರದ ಕಾರ್ಯಕ್ರಮ ನಿಮಿತ್ತ ಸಕಲೇಶಪುರ ತಾಲ್ಲೂಕಿನ...
“ಸದಾ ಜನಪರ ಕಾಳಜಿಯ ಶಾಸಕರು” ಮತ್ತು”ವಿಶೇಷ ಚೇತನನ ವಿಶಿಷ್ಟ ಕಾಳಜಿ”
ಕ್ಷೇತ್ರದ ಕಾರ್ಯಕ್ರಮ ನಿಮಿತ್ತ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಮಾರ್ಗಮಧ್ಯೆ ವಿಶೇಷ ಚೇತನ “ಜಯರಾಮ್” ಅವರನ್ನು ಆಕಸ್ಮಿಕವಾಗಿ
ಭೇಟಿ ಮಾಡಿದ ಸನ್ಮಾನ್ಯ ಶಾಸಕರಾದ ಶ್ರೀ ಯುತ ಸಿಮೆಂಟ್ ಮಂಜು, ಸಕಲೇಶಪುರ ವಿಧಾನಸಭಾ ಕ್ಷೇತ್ರ,ಕುಸಾಲೋಪಾರಿ ವಿಚಾರಿಸುತ್ತಾ
ಅಂಗವೈಕಲ್ಯತೆ ಇದ್ದರೂ ಸಹ ಇವರ ಜೀವನೋತ್ಸಾಹ ನೋಡಿ ಮನ ಸೋತು, ಸರ್ಕಾರದ ಸೌಲಭ್ಯಗಳ ಏನಾದರು ಬೇಕೆ ಎಂಬ ಪ್ರಶ್ನೆಗೆ ? “ನಮ್ಮೂರಿನ ರಸ್ತೆ ನಿರ್ಮಾಣ ಮಾಡಿಕೊಡಿ” ಎಂಬುದು ಅವರ ಉತ್ತರ !
ಜಯರಾಮ್ ರವರು ಶನಿವಾರಸಂತೆಯ ಗಂಗಾವಾರ ಗ್ರಾಮದ ನಿವಾಸಿ (ಮಡಿಕೇರಿ ವಿಧಾನಸಭಾ ಕ್ಷೇತ್ರ) ಇವರ ಬೇಡಿಕೆಯನ್ನು ಸದ್ಯದಲ್ಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ
ಶಾಸಕರಾದ ಶ್ರೀ ಯುತ ಮಂತರ್ ಗೌಡ , ಅವರ ಗಮನಕ್ಕೆ ತರುವ ಭರವಸೆ ನೀಡಿದರು.
ವರದಿ : ಭರತ್ ಮಲ್ನಾಡ್
