Home ರಾಜಕಾರಣ ಸಕಲೇಶಪುರ ಬೆಳಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ

ಸಕಲೇಶಪುರ ಬೆಳಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ

14
0

ಸಕಲೇಶಪುರ : ಬೆಳಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024- 25ನೇ ವಾರ್ಷಿಕ ಮಹಾಸಭೆ, ಎಲ್ಲರೂ ಷೇರುದಾರರಾಗುವ ಮೂಲಕ ಸಂಘ ಅಭಿವೃದ್ಧಿ ಮಾಡೋಣ ಬಸವರಾಜ್
ಅಧ್ಯಕ್ಷರಾದ ಬಿ ಎನ್ ಬಸವರಾಜ್ ಬೆಳಗೋಡು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಪ್ರಾರಂಭದಲ್ಲಿ ರೈತ ಗೀತೆಹಾಡಿ ಗೌರವಿಸಲಾಯಿತು.  ಬರಹಗಾರರು, ಚಿಂತಕರು, ಸಾಹಿತಿಗಳಾದ ಎಸ್ ಎಲ್ ಭೈರಪ್ಪನವರು ವಿಧಿವಶರಾದ ಹಿನ್ನೆಲೆ  ಮೌನಚರಣೆ ಮಾಡುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ ಆಯವ್ಯಯ ಜಮಾ ಬಂದಿ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ಪ್ರಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಆಡಳಿತದ ವ್ಯವಹಾರದ ಬಗ್ಗೆ ರೈತರು ಹಾಗೂ ನಿರ್ದೇಶಕರು, ಅಧ್ಯಕ್ಷರುಗಳ ನಡುವೆ ಚರ್ಚೆ ನಡೆದು ಅಧ್ಯಕ್ಷರಾದ ಬಿ ಎನ್ ಬಸವರಾಜ್ ಮಾತನಾಡಿ ಜನರು ಸಹಕಾರ ಸಂಘದೊಂದಿಗೆ  ವ್ಯವಹಾರ ಇಟ್ಟುಕೊಂಡು ಹಲವಾರು ಯೋಜನೆಗಳನ್ನು ಜಾರಿಗೊಳಿಸುವುದು ಹಾಗೂ ಹಣ ಹೂಡಿಕೆ ಮಾಡುವುದು ಪಿಗ್ಮಿ ಕಟ್ಟುವುದು ಹೀಗೆ ಜನಪರ ಹಾಗು ರೈತ ಪರ ಯೋಜನೆಗಳನ್ನು ರೂಪಿಸಿಕೊಂಡು ಹೋಗುವುದರಿಂದ ಹಾಗು ಅತಿ ಹೆಚ್ಚು ಷೇರುಗಳನ್ನು ಮಾರಾಟ ಮಾಡುವ ಮೂಲಕ ವಿಸ್ತರಣೆಗೆ ಹೆಚ್ಚುವರಿ ಆರ್ಥಿಕ ಬಂಡವಾಳ ಮೂಲಕ ಸಹಕಾರ ಸಂಘ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಈ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಪ್ರಸ್ತಾಪವಾಗಿದ್ದು, ಆಡಳಿತ ವ್ಯವಸ್ಥೆಯಲ್ಲಿ ಕೆಲವು ಕುಂದುಕೊರತೆ ಇದ್ದಲ್ಲಿ  ಮುಂದಿನ ಸಭೆಯಲ್ಲಿ ಸಮಸ್ಯೆ  ಪರಿಹಾರದ ಬಗ್ಗೆ  ಚರ್ಚಿಸಿ ಸರಿಪಡಿಸಿಕೊಂಡು ಹೋಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಚಂದ್ರಿಕಾ ನಿರ್ದೇಶಕರುಗಳಾದ ದೇವರಾಜ್, ಜಗದೀಶ್,ರವೀಶ್, ನೀಲಕಂಠ, ಯಲ್ಲಪ್ಪ, ವಚನ್ . ಹೇಮಂತ್ .ಸಾಜಿದ್ ಹುಸೇನ್ . ಸೇರಿದಂತೆ ಪ್ರಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಷೇರುದಾರರು, ರೈತ ಬಾಂಧವರು ಗ್ರಾಮಸ್ಥರು, ಆಡಳಿತ ಕಾರ್ಯನಿರ್ವಾಹಣಾಅಧಿಕಾರಿಲೋಕೇಶ್, ಸಿಬ್ಬಂದಿಗಳಾದ ಲೋಹಿತ್, ಹೆಚ್ ಸಿ ಪುಟ್ಟಸ್ವಾಮಿ ಸೇರಿದಂತೆ ನಾಗರೀಕರು ಉಪಸ್ಥಿತರಿದ್ದರು.
✍🏻 ಭರತ್ ಮಲ್ನಾಡ್

LEAVE A REPLY

Please enter your comment!
Please enter your name here