
ಸಕಲೇಶಪುರ : ಪುರಸಭೆ ವ್ಯಾಪ್ತಿಯ 21ನೇ ವಾರ್ಡ್ ನ (ಆಚಂಗಿ) 2ನೇ ಕ್ರಾಸ್, ಹದಗೆಟ್ಟ ರಸ್ತೆ ದುರಸ್ಥಿಗೆ ಒತ್ತಾಯ, ನಿವಾಸಿಗಳ ವಿನೂತನ ಪ್ರತಿಭಟನೆ! ತಕ್ಷಣವೇ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಶ್ರೀಯುತ ಸಿಮೆಂಟ್ ಮಂಜುಪುರಸಭೆ ವ್ಯಾಪ್ತಿಯ 21ನೇ ವಾರ್ಡ್ ನ (ಆಚಂಗಿ) 2ನೇ ಕ್ರಾಸ್ ಗ್ರಾಮಸ್ಥರು ನಿವಾಸಿಗಳು ತಮ್ಮ ಪ್ರದೇಶದ ರಸ್ತೆಯ ದಯನೀಯ ಸ್ಥಿತಿಯಿಂದ ಬೇಸತ್ತು ಸಾಂಕೇತಿಕವಾಗಿ ಗುಂಡಿ ಬಿದ್ದ ಜಾಗಕ್ಕೆ ಜಾಗೃತ ಮುನ್ಸೂಚನಾ ಕ್ರಮ ದೊಂದಿಗೆ ಪ್ರತಿಭಟನೆ ಮುಂದಾಗಿದ್ದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಶ್ರೀಯುತ ಸಿಮೆಂಟ್ ಮಂಜು ರಸ್ತೆಯನ್ನು ವೀಕ್ಷಿಸಿ ಮತ್ತು ಶೀತಲಾವಸ್ಥೆಯಲ್ಲಿರುವ ಒಳಚರಂಡಿ ದುರಸ್ತಿ ಗೊಳಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಶೀಘ್ರವಾಗಿ ರಸ್ತೆ ಒಳ ಚರಂಡಿ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಿದರು .ವರದಿ : ಭರತ್ ಮಲ್ನಾಡ್
