ಮಾಡಾಳು ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠ ಮಹಾಸಂಸ್ಥಾನದಲ್ಲಿ ಶ್ರೀ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಬೆಳ್ಳಿ ಪಲ್ಲಕ್ಕಿ ಮಹೋತ್ಸವ ವು ವಿವಿಧ ಕಲಾತಂಡಗಳು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಅದ್ದೂರಿಯಾಗಿ ಜರುಗಿತು ಜಾತ್ರಾ ಮಹೋತ್ಸವದ ನಿಮಿತ್ತ ಮುಂಜಾನೆ ಮಠದ ಆವರಣದಲ್ಲಿ ಯೋಗ ಸಮಾಧಿಯಲ್ಲಿರುವ ಮಹಾ ತಪಸ್ವಿ ಶ್ರೀ ಶಿವಲಿಂಗ ಸ್ವಾಮೀಜಿಯವರ ಗದ್ದುಗೆಯಲ್ಲಿ ಪುರೋಹಿತರಿಂದ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು 10:30ಕ್ಕೆ ಸರಿಯಾಗಿ ಮಠದ ಆವರಣದಲ್ಲಿ ರಜ್ಜುಗೊಳಿಸಲಾಗಿದ್ದ ಪುಷ್ಪಾಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀಗಳು ವಿರಾಜಮಾನರಾಗುತ್ತಿದ್ದಂತೆ ಸೇರಿದ್ದ ಭಕ್ತರು ಹರ ಹರ ಮಹಾದೇವ ಎಂಬ ಜಯ ಘೋಷದೊಂದಿಗೆ ಸಾಂಸ್ಕೃತಿಕ ವಿವಿಧ ಕಲಾತಂಡಗಳೊಂದಿಗೆ ಉಸ್ತವಕ್ಕೆ ಚಾಲನೆ ನೀಡಿದರು ಉತ್ಸವವು ಹಾರನಹಳ್ಳಿ ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ಮುಂಭಾಗದ ರಸ್ತೆ ಬದಿ ಕಾಯುತ್ತಿದ್ದಕಾಯುತ್ತಿದ್ದ ಮುಸ್ಲಿಂ ಬಾಂಧವರು ಪಲ್ಲಕ್ಕಿ ಬಳಿ ಬಂದು ಸ್ವಾಮೀಜಿಯವರನ್ನು ಸ್ವಾಗತಿಸಿ ಹಾರ ಶಾಲು ಹಾಕಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು ನಂತರ ಉತ್ಸವವು ಹಾರನಹಳ್ಳಿ ಪುರ ಪ್ರವೇಶ ಮಾಡಿ ಬೀದಿಗಳಲ್ಲಿ ಸಾಗುತ್ತಿದ್ದಂತೆ ಮಹಿಳೆಯರು ಆರತಿ ಬೆಳಗುತ್ತಿದ್ದರೆ ಭಕ್ತರು ಸ್ವಾಮೀಜಿಯವರಿಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು ಉತ್ಸವದ ಪ್ರಯುಕ್ತ ಗ್ರಾಮದ ಬೀದಿಗಳನ್ನು ತಳಿರು ತೋರಣ ಹಾಗೂ ಬಾಳೆ ಕಂದುಗಳಿಂದ ಶ್ಯ O ಗರಿಸಲಾಗಿತ್ತು ಬಿರುಬೆಸಿಲನ್ನು ಲೆಕ್ಕಿಸದೆ ನೂರಾರು ಭಕ್ತರು ಉತ್ಸವದೊಡವೆ ಹೆಜ್ಜೆ ಹಾಕುತ್ತಿದ್ದು ಜನರ ಗಮನ ಸೆಳೆಯಿತು ಮೂರು ಗಂಟೆಗೆ ಸರಿಯಾಗಿ ಉತ್ಸವವುವಾಪಸ್ ಮಠದಬಳಿ ಬಂದಾಗ ನೂರಾರು ಮಹಿಳೆಯರು ತಲೆಯ ಮೇಲೆ ದುಗ್ಗಳದ ಬಟ್ಟಲನ್ನು ತಮ್ಮ ತಲೆಯ ಮೇಲೆ ಹೊತ್ತು ಉಸ್ತವದ ಮುಂಭಾಗದಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳಿದರು ಧ್ವಜಾರೋಹಣ ಸ್ಥಳದಲ್ಲಿ ಮಹಿಳೆಯರುಹೆಜ್ಜೆ ನಮಸ್ಕಾರ ಹಾಗೂ ದಿಂಡುರುಳಿ ತಮ್ಮ ಹರಕೆ ಸಲ್ಲಿಸಿದರು ನಂತರ ಬೆಟ್ಟದ ತಪ್ಪಲಿನಲ್ಲಿ ವ್ಯವಸ್ಥೆಗೊಳಿಸಿದ್ದ ಶಾಮಿಯಾನದಡಿ ಮಹಿಳೆಯರು ಮುತ್ತೈದೆ ಸೇವೆ ಸಲ್ಲಿಸಿದರೆ ಶ್ರೀಗಳು ಲಿಂಗ ಪೂಜಾ ಅನುಷ್ಠಾನ ಮಾಡಿದರು ಬಳಿಕ ಬಂದ ಭಕ್ತಾದಿಗಳಿಗೆ ಮಠದವತಿಯಿಂದ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು







