ಶ್ಯಾನೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ ಎಲ್ ಜಯರಾಮ ಅವಿರೋಧವಾಗಿ ಆಯ್ಕೆ..
ಅರಸೀಕೆರೆ ತಾಲೂಕಿನ ಶಾನೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಇಂದು ನಡೆದ ಚುನಾವಣೆಯಲ್ಲಿ ಎಂ ಎಲ್ ಜಯರಾಮು ಅವಿರೋಧವಾಗಿ ಆಯ್ಕೆಯಾದರು ಈ ಹಿಂದೆ ಇದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಿರಿಯ ರಾಜಕೀಯ ಮುಖಂಡರಾದ ವಿಜಯಕುಮಾರ್ ರವರ ರಾಜೀನಾಮೆಯಿಂದ ತೆರೆವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು ಚುನಾವಣೆ ಅಧಿಕಾರಿಗಳಾಗಿ ಅರಸೀಕೆರೆ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಣಾ ಅಧಿಕಾರಿಗಳಾದ ಸತೀಶ್ ಕಾರ್ಯನಿರ್ವಹಿಸಿದ್ದರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಶಾ. ಮಾಲಾ ಲಿಂಗರಾಜು. ಗಿರಿಯಪ್ಪ ಮಂಜಪ್ಪ. ಪುಷ್ಪಾ ಪ್ರದೀಪ್. ಮಮತಾ ಮಂಜುನಾಥ್. ಮರಿ ಸಂಕಪ್ಪ. ಮಂಜುನಾಥ್. ಮೇಲಪ್ಪಾ ಬಸಮ್ಮ ಶಾಂತಮ್ಮ ವನಜಾಕ್ಷಮ್ಮ ಸೇರಿದಂತೆ ಶಾನೆಗೆರೆ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು ನೂತನ ಅಧ್ಯಕ್ಷರಿಗೆ ಅಭಿನಂದನೆ ನೂತನ ಅಧ್ಯಕ್ಷರಾದ ಎಂಎಲ್ ಜಯರಾಮ್ ರವರಿಗೆ ಶಾನೆಗೆರೆ ಅಭಿವೃದ್ಧಿ ಅಧಿಕಾರಿಗಳಾದ ಧರ್ಮೇಂದ್ರ ಕುಮಾರ್. ಮತ್ತು ಶಿಕ್ಷಣ ಇಲಾಖೆಯ ಜಿಡಿ ಪರಮೇಶ್. ಹಿರಿಯ ರಾಜಕೀಯ ಮುಖಂಡರಾದ ಬೇವಿನಹಳ್ಳಿ ಮೋಕ್ಷರಾಜು. ಜೆಸಿಬಿ ರಾಜು ಶುಭ ಹಾರೈಸಿದ್ದಾರೆ