Home ರಾಜ್ಯ *ಮುಖ್ಯಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಗಳ ಸೌಲಭ್ಯ ವಿತರಣೆ ಪೂರ್ವಭಾವಿ ಸಭೆ.

*ಮುಖ್ಯಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಗಳ ಸೌಲಭ್ಯ ವಿತರಣೆ ಪೂರ್ವಭಾವಿ ಸಭೆ.

56
0

…….ಅರಸೀಕೆರೆ
ಬರುವ 26 ನೇ ತಾರೀಖಿನಂದು ಅರಸೀಕೆರೆ ನಗರಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಹಾಗೂ ಹಲವಾರು ಸಚಿವರೊಡನೆ ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ್ ಲಾಡ್ ರವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ಅರಸೀಕೆರೆ ತಾಲೂಕ್ ಪಂಚಾಯಿತಿ ಸಭಾಂಗಣದ ಆವರಣದಲ್ಲಿ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಸಭೆಯನ್ನು ಕರೆಯಲಾಗಿತ್ತು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಭಾಗಿಯ ಸಹಾಯಕ ಕಾರ್ಮಿಕ ಆಯುಕ್ತರಾದ ಸುಭಾಷ್ ಎಮ್ ಆಲದಕಟ್ಟಿ ಯವರು ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರು ಅಸಂಘಟಿತ ಕಾರ್ಮಿಕರಿಗೆ ಸಾಂಕೇತಿಕವಾಗಿ ಇಲಾಖೆ ಸವಲತ್ತುಗಳ ವಿತರಣೆಯನ್ನು ಮಾಡಲಾಗುವುದು ನಂತರ ಅರಸೀಕೆರೆಯ ಕಾರ್ಮಿಕ ಇಲಾಖೆಯಲ್ಲಿ ಬಂದು ತಮಗೆ ಸಿಗುವಂತ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದುಕೊಂಡು ಇಲಾಖೆ ಪ್ರಯೋಜನ ಪಡೆದುಕೊಳ್ಳಬೇಕೆಂದರು ಬರುವ ದಿನಗಳಲ್ಲಿ ಇಲಾಖೆಯಿಂದ ಸಿಗುವಂತಹ ಸರ್ಕಾರದ ಸವಲತ್ತುಗಳ ಬಗ್ಗೆ ಕಾರ್ಯಗಾರವನ್ನು ಏರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು ಸಭೆಯಲ್ಲಿ ಫೋಟೋಗ್ರಾಫರ್, ಅಸೋಸಿಯೇಷನ್. ಟೈಲರ್ ಅಸೋಸಿಯೇಷನ್. ಬೀದಿ ಬದಿ ಕಾರ್ಮಿಕರು ಕಟ್ಟಡ ಕಾರ್ಮಿಕರು ಬಿಡಿ ಕಾರ್ಮಿಕರು .. ಹೀಗೆ ಹಲವಾರು ಸಂಘಗಳ ಸಂಸ್ಥೆಗಳ ಅಸಂಘಟಿತ ಕಾರ್ಮಿಕಗಳ ಮುಖಂಡರು ಕಟ್ಟಡ ಕಾರ್ಮಿಕರ ಸಂಘದ ಮುಖಂಡರು. ಉಪಸ್ಥಿತರಿದ್ದರು. ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಯಮುನಾ. ಅರಸೀಕೆರೆ ತಾಲೂಕ್ ಕಾರ್ಮಿಕ ನಿರೀಕ್ಷಕರಾದ ವೈ ಎಲ್. ಶಶಿಕಲಾ. ಕಾರ್ಮಿಕ ಇಲಾಖೆ ಸಿಬ್ಬಂದಿಗಳಾದ ಅನಿಲ್ ಕುಮಾರ್. ಕಾರ್ಮಿಕ ಬಂದು ನಾಗರಾಜ್. ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು..

ಕಟ್ಟಡ ಕಾರ್ಮಿಕರ ಮಕ್ಕಳ ವಸತಿ ಶಾಲೆಗೆ ಮಂಜೂರಾಗಿರುವ ಹಬ್ಬನಘಟ್ಟಕಾವಲಿನ ಸರ್ವೆ ನಂಬರ್ 68 ರಲ್ಲಿನ ಜಾಗವನ್ನು ಈ ದಿನ ಶ್ರೀ ಸುಭಾಷ್ ಎಮ್. ಸಹಾಯಕ ಕಾರ್ಮಿಕ ಆಯುಕ್ತರು ಇವರು ಸ್ಥಳ ಪರಿಶೀಲನೆ ನಡೆಸಿದರು. ಇವರ ಜೊತೆಯಲ್ಲಿ ಶ್ರೀಮತಿ ಯಮನ ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಶ್ರೀಮತಿ ಶಶಿಕಲಾ ಅರಸೀಕೆರೆ ತಾಲೂಕು ಕಾರ್ಮಿಕ ನಿರೀಕ್ಷಕರು ಹಾಗೂ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಸಿಬ್ಬಂದಿ ಅನಿಲ್ ಹಾಜರಿದ್ದರು.

LEAVE A REPLY

Please enter your comment!
Please enter your name here