Home ರಾಜಕಾರಣ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಮ್ ರವರಿಗೆ ಎಲ್ಲಾ ಪತ್ರಕರ್ತರ ಸಂಘಟನೆಗಳ ಕಾರ್ಯಾಗಾರಕ್ಕೆ ಅನುದಾನ ಒದಗಿಸಲು...

ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಮ್ ರವರಿಗೆ ಎಲ್ಲಾ ಪತ್ರಕರ್ತರ ಸಂಘಟನೆಗಳ ಕಾರ್ಯಾಗಾರಕ್ಕೆ ಅನುದಾನ ಒದಗಿಸಲು ಮಹಾಒಕ್ಕೂಟ ಒತ್ತಾಯ :- ದಿನಾಂಕ 17-07-2025, ಗುರುವಾರ ಸಂಜೆ ಬೆಂಗಳೂರಿನಲ್ಲಿರುವ ರಾಜ್ಯದ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಮಾನ್ಯ ಆಯೇಷಾ ಖಾನಮ್ ರವರನ್ನ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟದ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳು ಭೇಟಿ ಮಾಡಿ, ರಾಜ್ಯದ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಮ್ ರವರಲ್ಲಿ ಮನವರಿಕೆ ಮಾಡಲಾಗಿ, ಸಣ್ಣ-ಮಧ್ಯಮ ಮತ್ತು ದಿನಪತ್ರಿಕೆ (ಮಾಧ್ಯಮ ಪಟ್ಟಿಗೆ ಸೇರಿಲ್ಲದ) ಪತ್ರಿಕೆಗಳಿಗೆ ವಾರ್ಷಿಕ 2,00,000 (ಎರಡು ಲಕ್ಷರೂಗಳ ಪ್ರೋತ್ಸಾಹ ಜಾಹೀರಾತು) ರಾಜ್ಯ ವಾರ್ತಾ ಇಲಾಖೆಯಿಂದ ಕೊಡಿಸುವಂತೆ ಮನವಿ ಮಾಡಲಾಗಿ, ಈ ವಿಚಾರದ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರ ಗಮನಕ್ಕೆ ತರಬೇಕೆಂದು ಮಾನ್ಯ ಆಯೇಷಾ ಖಾನಮ್ ರವರಲ್ಲಿ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟದಿಂದ ಮನವಿ ಮಾಡಲಾಗಿ, ನಮ್ಮ ಮನವಿಗೆ ಸ್ಪಂಧಿಸಿದ ಮಾನ್ಯ ಆಯೇಷಾ ಖಾನಮ್ ರವರಿಗೆ ಧನ್ಯವಾದಗಳ ಜೊತೆಗೆ ತಮ್ಮ ಮಾಧ್ಯಮ ಅಕಾಡೆಮಿ ವತಿಯಿಂದ ಪತ್ರಕರ್ತರ ಕಾರ್ಯಗಾರಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೊಂದೇ ಅನುದಾನ ನೀಡುತ್ತಿದ್ದು ಇನ್ನು ಮುಂದೆ ಎಲ್ಲಾ ಪತ್ರಕರ್ತರ ರಾಜ್ಯ ಸಂಘಟನೆಗಳಿಗೆ ಅನುದಾನ ಹಂಚಿಕೆಯಾಗಿ ಕಾರ್ಯಗಾರಗಳು ನಡೆಸುವುದಕ್ಕೆ ತಾವುಗಳು ಅನುವು ಮಾಡಿಕೊಡಲೇಬೇಕೆಂದು ಒಕ್ಕೂಟ ಒತ್ತಾಯಿಸಿದ್ದಕ್ಕೆ ಎಲ್ಲಾ ಸಂಘಟನೆಗಳಿಗೂ ಅನುದಾನ ನೀಡುವುದಾಗಿ ಮಾಧ್ಯಮ ಅಕಾಡೆಮಿ ಅಧ್ಯಕ್ಷರು ಸಮ್ಮತಿ ಸೂಚಿಸಿದ್ದಾರೆ..

32
0

ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾಒಕ್ಕೂಟದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರು), ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶಿವಪ್ರಸಾದ್ ಜಿ (ಸೂರ್ಯಾಗ್ನಿ ಶಿವು, ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು), ರಾಜ್ಯ ಉಪಾಧ್ಯಕ್ಷರಾದ ವಿನಯ್ ಕುಮಾರ್ (ನ್ಯೂಸ್ಪೇಪರ್ ಎಂಪ್ಲೋಯೀಸ್ ವರ್ಕಿಂಗ್ ಜರ್ನಲಿಸ್ಟ್ ಯೂನಿಯನಿನ ರಾಜ್ಯಾಧ್ಯಕ್ಷರು), ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಶ್ರೀನಿವಾಸ್ ರಾವ್ ಟಿ ಎಲ್ (ಕರುನಾಡು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು), ರಾಜ್ಯ ಜಂಟಿ ಸಂಘಟನಾ ಕಾರ್ಯದರ್ಶಿಯಾದ ವೇಣುಗೋಪಾಲ್ (ಸಮಗ್ರ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು), ರಾಜ್ಯ ಜಂಟಿ ಕಾರ್ಯದರ್ಶಿಯಾದ ಮನೀಶ್ ಸೂರ್ಯ (ಕರ್ನಾಟಕ ದಲಿತ ಪತ್ರಕರ್ತರ ವೇದಿಕೆಯ ರಾಜ್ಯಾಧ್ಯಕ್ಷರು) ಮತ್ತಿತರೆ ಸದಸ್ಯ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.

ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲಾ ಮಹಾ ಒಕ್ಕೂಟದ ಪದಾಧಿಕಾರಿಗಳಿಗೂ ಮತ್ತು ಒಕ್ಕೂಟದ ಸದಸ್ಯ ಸಂಘಗಳ ಪದಾಧಿಕಾರಿಗಗಳಿಗೂ ಧನ್ಯವಾದಗಳು.

ಇಂತಿ ಮಹಾಒಕ್ಕೂಟದ ಪದಾಧಿಕಾರಿಗಳ ಪರವಾಗಿ
ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳು

LEAVE A REPLY

Please enter your comment!
Please enter your name here