ಹಾಸನ ಮಾಜಿ ಸಂಸದರಾದ ಶ್ರೀಯುತ ಪ್ರಜ್ವಲ್ ರೇವಣ್ಣನವರ
34 ನೇಯ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು.
ಅರಸೀಕೆರೆ
ಅರಸೀಕೆರೆ ಕ್ಷೇತ್ರದ
ಜೆಡಿಎಸ್ ಮುಖಂಡರಾದ ಜ್ಯೋತಿ ಗಂಗಾಧರ್ ರವರ ನೇತೃತ್ವದಲ್ಲಿ ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ
ಶ್ರೀ ವಿಜ್ಞೇಶ್ವರ ದೇವಸ್ಥಾನದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ರೊಂದಿಗೆ ಪೂಜೆ ಸಲ್ಲಿಸಿದರು ಹಾಗೂ ಮಾಜಿ ಶಾಸಕರಾದ ಪರಮೇಶ್ವರಪ್ಪ ರವರು
ನಮ್ಮ ಮಾಧ್ಯಮದ ಜೊತೆ ಮಾತನಾಡಿ
ವಿಜ್ಞೇಶ್ವರ ದೇವರು
ಮಾಜಿ ಸಂಸದ ಪ್ರಜ್ವಲ್ ರೇವಣ್ಣರವರಿಗೆ ಒಳ್ಳೆಯ ಆರೋಗ್ಯ ಕೊಟ್ಟು ಕಾಪಾಡಲಿ ಹಾಗೂ ಈಗ ಬಂದ ಸಂಕಷ್ಟ ನಿವಾರಣೆ ಮಾಡಲಿ. ಮತ್ತು ಮುಂದಿನ ದಿನಗಳಲ್ಲಿ ರಾಜಕೀಯ ಜೀವನದಲ್ಲಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಉಜ್ವಲ ಭವಿಷ್ಯ ನೀಡಲಿ ಎಂದು ವಿಘ್ನೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ನಂತರ ಅರಸೀಕೆರೆ ನಗರದ ಸರ್ಕಾರಿ ಜೆ ಸಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ ನಂತರ ಜೆಡಿಎಸ್ ಮುಖಂಡರಾದ ಹೊಸೂರು ಗಂಗಾಧರ್ ರವರು
ಸಭೆ ಉದ್ದೇಶಿಸಿ ಮಾತನಾಡಿ ನಮ್ಮ ಮಾಜಿ ಸಂಸದರು ಪ್ರಜ್ವಲ್ ರೇವಣ್ಣ ರವರಿಗೆ ಈಗಿರುವ ಸಂಕಷ್ಟ ನಿವಾರಣೆ ಆಗಲಿ ಮುಂದಿನ ದಿನಗಳಲ್ಲಿ ರಾಜಕೀಯ ಜೀವನಕ್ಕೆ ಮರಳಿ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ.
ತಾಲೂಕ್ ಪಂಚಾಯತಿ ಮಾಜಿ ಅಧ್ಯಕ್ಷರು ಶೇಖರ್ ನಾಯಕ್ ಹಾಗೂ ಮಾಜಿ ಉಪಾಧ್ಯಕ್ಷರು ಬಸವಲಿಂಗ,
ಎಚ್ ಡಿ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ಅಧ್ಯಕ್ಷರು ನಿರಂಜನ್ ಮೂರ್ತಿ,
ಪ್ರಜ್ವಲ್ ರೇವಣ್ಣ ಅಭಿಮಾನಿಗಳ ಬಳಗದ ಎಸ್ ಎಲ್ ಎನ್ ಯೋಗೇಶ್ ,ಗಂಡಸಿ ಹೋಬಳಿಯ ಜೆಡಿಎಸ್ ಮುಖಂಡರಾದ ಜಕ್ನಳ್ಳಿವಾಸು,ಮಂಜುನಾಥ ,
ವಿಠಲಾಪುರ ಮಧು, ಪುಟ್ಟ ಬಸಪ್ಪ ಚಿಕ್ಕೂರು,ಮೇಲನಳ್ಳಿ ಮಲ್ಲಿಕಾರ್ಜುನ್ , ಅಶ್ವಥ್.
ಅರಸೀಕೆರೆ ನಗರದ ಜೆಡಿಎಸ್ ಮುಖಂಡರುಗಳಾದ
ರವಿ .ಗಣೇಶ್. ನವಾಜ್, ಮನು ,ಭರತ್ ,ವಿಶ್ವನಾಥ
ಜೆಡಿಎಸ್ ಕಾರ್ಯಕರ್ತ ಬಂಧುಗಳು ,
ರೈತ ಬಾಂಧವರು, ಸಾರ್ವಜನಿಕ ಬಂಧುಗಳು ಇನ್ನಿತರರು ಉಪಸ್ಥಿತರಿದ್ದರು..

ವಿಶುಕುಮಾರ್ ಅರಸಿಕೆರೆ