Home Uncategorized ಉಡುಪಿಯ ಕೊರಂಗ್ರಪಾಡಿ ಬೈಲೂರು  ಇಲ್ಲಿಯ ಅದ್ದೂರಿ ಗಣೇಶೋತ್ಸವ

ಉಡುಪಿಯ ಕೊರಂಗ್ರಪಾಡಿ ಬೈಲೂರು  ಇಲ್ಲಿಯ ಅದ್ದೂರಿ ಗಣೇಶೋತ್ಸವ

37
0

ವರದಿ ದಯಾನಂದ ಕೋಟ್ಯಾನ್ ಉಡುಪಿ

ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೋರಂಗ್ರಪಾಡಿ  ಬೈಲೂರು ಇದರ 28ನೇ ವರ್ಷದ ಗಣೇಶೋತ್ಸವ ಬಹಳ ವಿಜೃಂಭಣೆಯಿಂದ ಅದ್ದೂರಿಯಾಗಿ ಸಂಪನ್ನಗೊಂಡಿತು  27ನೇ ತಾರೀಕು ವಿದ್ವಾನ್ ಜ್ಯೋತಿಷಿ ಶ್ರೀ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳು ನೆರವೇರಿತು ಮಧ್ಯಾಹ್ನ ಮಹಾಪೂಜೆ ನಂತರ ಶ್ರೀ ಮಹಾವಿಷ್ಣುಮೂರ್ತಿ ಬಾಲ ಭಜನ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ಸಂಜೆ 4.30. ರಿಂದ ಹಂಸಾ ಖ್ಯ ಯಕ್ಷಗಾನ ಪ್ರತಿಷ್ಠಾನ ಬೈಲೂರು ಇವರಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ನಂತರ ಶ್ರೀ ಗಣಪತಿ ದೇವರಿಗೆ ರಂಗ ಪೂಜೆ ಹಾಗೂ ರಾತ್ರಿ ಮಹಾಪೂಜೆ  ಪ್ರಸಾದ ವಿತರಣೆ ಮಾಡಿ ರಾತ್ರಿ 7:30 ರಿಂದ ನವರಸ ಕಲಾವಿದರು ಸುರತ್ಕಲ್ ಇವರಿಂದ ನಿರೇಲ್ ತುಳು ನಾಟಕ ಬಹಳ ಯಶಸ್ವಿಯಾಗಿ ಮೂಡಿ ಬಂತು ಇಷ್ಟೆಲ್ಲಾ ಕಾರ್ಯಕ್ರಮದ ಮಧ್ಯೆ ಎಡೆಬಿಡದ ಮಳೆ ಸುರಿತಿದ್ದರು ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು ತಾರೀಕು 28.08.25 ರಂದು ಬೆಳಿಗ್ಗೆ ಶ್ರೀ ಕೃಷ್ಣಮೂರ್ತಿ ತಂತ್ರಿ ಗಳ ನೇತೃತ್ವದಲ್ಲಿ 1008 ನಾಳಿಕೆರ ಗಣ ಯಾ ಗದೊಂದಿಗೆ ಮಧ್ಯಾಹ್ನ ಮಹಾಪೂಜೆ ನೆರವೇರಿಸಿ 12:30 ರಿಂದ ಮಹಾ ಅನ್ನಸಂತರ್ಪಣೆ ನೆರವೇರಿತು ಸುಮಾರು 1500 ಜನ ಅನ್ನಪ್ರಸಾದ ಸ್ವೀಕರಿಸಿದರು ವೇದಿಕೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನೆರವೇರಿತು ಸಂಜೆ 4:30 ರಿಂದ ಮಹಾಪೂಜೆ ಯೊಂದಿಗೆ ವಿಸರ್ಜನ ಮೆರವಣಿಗೆ ಪ್ರಾರಂಭವಾಗಿ ರಾತ್ರಿ 8.20.  ಕೆ  ಕೊರಂಗ್ರಪಾಡಿ ಶ್ರೀ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಕೆರೆಯಲ್ಲಿ ಜಲ ಸ್ತಂಭ ನ ಮಾಡಲಾಯಿತು ಎಲ್ಲಾ ಕಾರ್ಯಕ್ರಮದ ಕೊನೆಯಲ್ಲಿ ವರುಣನ ಸಿಂಚನವಾಯಿತು ಮಧ್ಯಾಹ್ನದವರೆಗೆ ಎಡೆಬಿಡದೆ ಮಳೆಸುರಿಯುತ್ತಿದ್ದರೂ ವಿಸರ್ಜನ ಮೆರವಣಿಗೆ ಪ್ರಾರಂಭಕ್ಕು ಮೊದಲೇ ಮಳೆ  ನಿಂತು ಜಲಸ್ತಂಬನದ ಕೊನೆಯಲ್ಲಿ ಮಳೆ ಪ್ರಾರಂಭವಾಗಿದೆ ಇದಕ್ಕೆಲ್ಲ ಕಾರಣ ಸಮಿತಿ ಸದಸ್ಯರ ಶ್ರದ್ಧಾ ಭಕ್ತಿ ಮತ್ತು ಪ್ರಾರ್ಥನೆ ಉಡುಪಿ ಮುಖ್ಯಪ್ರಾಣ ಶ್ರೀ ಕೃಷ್ಣನ ಸಾನಿಧ್ಯಕ್ಕೆ ಹರಕೆ ಹೊತ್ತು ನಮ್ಮ ಕಾರ್ಯಕ್ರಮ ಯಶಸ್ವಿಯಾದರೆ ಶ್ರೀಮುಖ್ಯಪ್ರಾಣದೇವರಿಗೆ ಪಂಚಗಜ್ಜಾಯ ಸೇವೆ ಹಾಗೂ ಶನಿವಾರ ಶ್ರೀ ಕೃಷ್ಣನ ಅನ್ನಪ್ರಸಾದ ನೆಲದಲ್ಲಿ ಸ್ವೀಕರಿಸುವ ಹರಕೆ ಹೊತ್ತು ಕಾರ್ಯಕ್ರಮದ ಯಶಸ್ವಿಯನ್ನು ಕಂಡುಕೊಂಡಿರುತ್ತಾರೆ ಅಧ್ಯಕ್ಷರಾಗಿ ಶ್ರೀ ಪ್ರಸಾದ್ ಶೆಟ್ಟಿ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಶಂಕರ್ ಪಾಲನ್ ಕೋಶಾಧಿಕಾರಿಯಾಗಿ ಶ್ರೀ ಜಗನ್ನಾಥ ಕೆ.  ಹಾಗೂ ಅರುಣ್ ಶೆಟ್ಟಿಗಾರ್ ಸುರೇಶ್ ಸುವರ್ಣ ಹರೀಶ್ ಶೆಟ್ಟಿಗಾರ್ ಜಗದೀಶ್ ಸತೀಶ್ ಸುವರ್ಣ ಉಮೇಶ್ ಕೋಟ್ಯಾನ್ ಜಯಕರ ಅಮೀನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here