ಅರಸೀಕೆರೆ : ನಗರದ ಹಾಸನದ ರಸ್ತೆಯಲ್ಲಿರುವ ರಾಯಲ್ ಪದವಿ ಕಾಲೇಜು ಆವರಣದಲ್ಲಿ ರಾಯಲ್ ಕನ್ನಡೋತ್ಸವ ೨೦೨೫ ಭವ್ಯ ಕಾರ್ಯಕ್ರಮದ ದ್ವಜಾರೋಹಣ ನೆರವೇರಿಸಿ ಮಾತನಾಡಿದ ನಗರ ಯೋಜನಾ ಪ್ರಾದಿಕಾರ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್ ನಾಡು ನುಡಿಗಳ ಅಭಿಮಾನ ಎಲ್ಲರಿಗೂ ಅತೀ ಮುಖ್ಯವಾಗಿರುತ್ತದೆ ಕೇವಲ ಅಭಿಮಾನದಿಂದ ಭಾಷೆಯ ರಕ್ಷಣೆ ಸಾಧ್ಯವಿಲ್ಲ. ಪ್ರತಿಯೊಬ್ಬ ಕನ್ನಡಿಗನೂ ರಾಜ್ಯದಲ್ಲಿ ಕನ್ನಡದಲ್ಲೇ ಮಾತನಾಡುವ, ವ್ಯವಹರಿಸುವ ಪ್ರತಿಜ್ಞೆಗೈಯ್ಯೋಣ. ಕನ್ನಡವನ್ನು ಬಳಸೋಣ, ಬೆಳೆಸೋಣ ಮುಂದಿನ ಪೀಳಿಗೆಗೆ ಅತ್ಯವಶ್ಯಕ ಎಂದು ತಿಳಿಸಿದ್ದರು ಭುವನೇಶ್ವರಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿದ ಕರವೇ ಜಿಲ್ಲಾ ಉಪಧ್ಯಾಕ್ಷರಾದ ಹೇಮಂತ್ ಕುಮಾರ್ ಕಾಲೇಜುಗಳಲ್ಲಿ ಇಂತಹ ನಾಡಾಭಿಮಾನ ಕಾರ್ಯಕ್ರಮಗಳು ಅತೀ ಅಗತ್ಯವಾಗಿದೆ ಕನ್ನಡ ಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ. ಅದು ಕೇವಲ ಶಬ್ದ-ವಾಕ್ಯಗಳಲ್ಲ. ಭಾಷೆಯಲ್ಲಿ ಅದನ್ನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ಅದು ನಮ್ಮ ಸಂಸ್ಕೃತಿ, ಇತಿಹಾಸ, ನೆಲ-ಜಲದ ಸಂಪತ್ತು ಸೇರಿದಂತೆ ಎಲ್ಲವನ್ನೂ ಒಳಗೊಂಡ ಅಸ್ಮಿತೆ ಇದನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಎಂದರು ಪ್ರಾಂಶುಪಾಲರಾದ ಕೆ,ಎಸ್ ಮಂಜುನಾಥ್ ಮಾತನಾಡಿ ಕನ್ನಡ ಸಾಂಸ್ಕೃತಿಕ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತೇವೆ ರಾಷ್ಟ್ರಕವಿ ಕುವೆಂಪುರವರು ಹೇಳಿದಂತೆ, ನಮ್ಮ ಕರುನಾಡು ಸುಂದರ ನದಿ ವನಗಳ ನಾಡು. ರಸಋಷಿಗಳ ಬೀಡು. ಗಂಧದ ಚಂದದ ಹೊನ್ನಿನ ಗಣಿ. ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರ ಮಧ್ವರ, ರನ್ನ ಷಡಕ್ಷರಿ ಪೊನ್ನ, ಪಂಪ ಜನ್ಮಿಸಿದ ನಾಡು. ಎಂದು ನಾಡಿನ ಹಿರಿಮೆಯನ್ನು ಹೊಗಳಿದರು ಹಿರಿಯ ಉಪನ್ಯಾಸಕರಾದ ಕೆ,ಸಿ ನಟರಾಜ್ ರವರನ್ನು ಸನ್ಮಾನಿಸಲಾಯಿತು ಈ ವೇದಿಕೆಯಲ್ಲಿ ಡಿವೈಎಸ್ಪಿ ಗೋಪಿ ಹಾಗೂ ನಗರ ಪೋಲಿಸ್ ವೃತ್ತ ನಿರೀಕ್ಷಕ ಕೃಷ್ಣಕುಮಾರ್ ಹಾಗೂ ಪ್ರಕಾಶ್ ಕಾಲೇಜಿನ ಕಾರ್ಯದರ್ಶಿಗಳಾದ ಉಷಾ ಬೊಪಯ್ಯರವರು ಸೇರಿದಂತೆ , ಉಪನ್ಯಾಸಕರಾದ ಮಾಲತೇಶ್,ಅಮೃತ್, ಸಚಿನ್,ಹೇಮಾ,ರೊಷನ್ ತಾಜ್, ಬೃಂದಾ ರವರು ಉಪಸ್ಥಿತರಿದ್ದರು ಕಾಲೇಜಿನ ವಿಧ್ಯಾರ್ಥಿಗಳು ಬಸವೇಶ್ವರರು ಕನಕದಾಸರು,ಕಿತ್ತೂರು ಚೆನ್ನಮ್ಮ,ಸಂಗೊಳ್ಳಿ ರಾಯಣ್ಣ,ಭುವನೇಶ್ವರಿ ಛದ್ಮವೇಷಧಾರಿಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ,ವಿಧ್ಯಾರ್ಥಿಗಳು ಜಾನಪದ ನೃತ್ಯ ಮಾಡಿದರು ಕನ್ನಡ ಬಾವುಟದೊಂದಿಗೆ ಸಾಂಸ್ಕೃತಿಕ ಕಲಾ ತಂಡದೊಂದಿಗೆ ನಗರದ ಮುಖ್ಯರಸ್ತೆಯಲ್ಲಿ ಭವ್ಯ ಮೆರವಣಿಗೆ ನೆಡೆಸುವ ಮೂಲಕ ಅರ್ಥಪೂರ್ಣ ಸಂಭ್ರಮದ ನಾಡಹಬ್ಬ ಆಚರಿಸಲಾಯಿತು.







